ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ರಿಲೀಸ್`ಗೆ ರೆಡಿ. ಈ ಚಿತ್ರದಲ್ಲಿ ದರ್ಶನ್ ಅತಿಥಿ ನಟನಾಗಿ ನಟಿಸಿದ್ದಾರೆ. ಅದು ಪ್ರಜ್ವಲ್ ಮೇಲಿನ ಪ್ರೀತಿಗಾಗಿ. ಈ ಚಿತ್ರಕ್ಕೆ ಪ್ರಜ್ವಲ್ ಎದುರು ನಾಯಕಿಯಾಗಿರೋದು ಜಾಕಿ ಭಾವನಾ. ಇನ್ನೊಂದು ಪ್ರಮುಖ ಪಾತ್ರದಲ್ಲಿ ರಘು ಮುಖರ್ಜಿ ಇದ್ದಾರೆ. ಸಿನಿಮಾ ಫೆಬ್ರವರಿ 5ರಂದು ರಿಲೀಸ್ ಆಗುತ್ತಿದೆ.
ಇದುವರೆಗೆ ದರ್ಶನ್ ಈ ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ ಎಂದೇ ಎನ್ನಲಾಗುತ್ತಿತ್ತು. ಅದನ್ನ ಕೇಳಿಯೇ ಥ್ರಿಲ್ ಆಗಿದ್ದ ಅಭಿಮಾನಿಗಳಿಗೆ ಪ್ರಜ್ವಲ್ ಹೊಸ ಹುಳ ಬಿಟ್ಟಿದ್ದಾರೆ. ಅಭಿಮಾನಿಗಳ ಜೊತೆ ಲೈವ್ನಲ್ಲಿದ್ದ ಪ್ರಜ್ವಲ್ ದರ್ಶನ್ ಪಾತ್ರದ ಬಗ್ಗೆ ಹೇಳಿರೋದು ಇಷ್ಟೆ. `ದರ್ಶನ್ ಅಣ್ಣನ ಪಾತ್ರದ ಬಗ್ಗೆ ಏನೂ ಹೇಳಲ್ಲ. ದೊಡ್ಡ ಪರದೆ ಮೇಲೆ ನೋಡಿ. ಮಜಾ ಇರುತ್ತೆ. ಈಗಲೇ ಹೇಳಿದ್ರೆ ಕುತೂಹಲ ಇರಲ್ಲ ಎಂದಿದ್ದಾರೆ.
ಹಾಗಾದರೆ ದರ್ಶನ್ ಮಾಡಿರೋ ಪಾತ್ರ ಎಂಥದ್ದು..? ಡೈರೆಕ್ಟರ್ ನರಸಿಂಹರೇ ಹೇಳಬೇಕು. ಇಲ್ಲವೇ ನಿರ್ಮಾಪಕರಾದ ವಿಖ್ಯಾತ್ ಹೇಳಬೇಕು. ಅವರಿಗೆ ಕೇಳಿದ್ರೆ ಫೆಬ್ರವರಿ 5ಕ್ಕೆ ಗೊತ್ತಾಗುತ್ತೆ. ವೇಯ್ಟ್ ಮಾಡಿ ಅಂದಾರು.