ಕಿಚ್ಚ ಸುದೀಪ್ ಅವರನ್ನು ಪ್ರೆಸ್ ಕ್ಲಬ್ ವರ್ಷದ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರೆಸ್ ಕ್ಲಬ್ ಪ್ರತಿ ವರ್ಷ ವಿಶೇಷ ಪ್ರಶಸ್ತಿಗಳನ್ನು ನೀಡುತ್ತಿದ್ದು, ಈ ಬಾರಿ ಸುದೀಪ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ನಟ ಸುದೀಪ್ ಅವರು ನಾರಾಯಣ ಹೆಲ್ತ್ ಕೇರ್`ನ ಡಾ.ದೇವಿ ಪ್ರಸಾದ್ ಶೆಟ್ಟಿ ಅವರೊಂದಿಗೆ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇನ್ನು ವರ್ಷದ ವಿಶೇಷ ವ್ಯಕ್ತಿ ಪ್ರಶಸ್ತಿಗೆ ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರೇಮ್ ಜಿ, ಸುದೀಪ್, ಡಾ.ದೇವಿ ಶೆಟ್ಟಿ ಅವರೊಂದಿಗೆ 25 ಪತ್ರಕರ್ತರು ಪ್ರೆಸ್ ಕ್ಲಬ್ ಪ್ರಶಸ್ತಿ ಸ್ವೀಕರಿಸಲಿದ್ದು, ಫೆಬ್ರವರಿ 3ನೇ ವಾರ ಕಾರ್ಯಕ್ರಮ ನಡೆಯಲಿದೆ.
ಚಿತ್ರಲೋಕ ಡಾಟ್ ಕಾಂನ ಅಂಕಣಕಾರರೂ ಆಗಿದ್ದ ಹಿರಿಯ ಪತ್ರಕರ್ತ ಉದಯ ಮರಕಿಣಿ ಸೇರಿದಂತೆ ಒಟ್ಟು 25 ಪತ್ರಕರ್ತರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.