ತಲಾಖ್.. ಇತ್ತೀಚಿನ ವರ್ಷಗಳಲ್ಲಿ ಭಾರೀ ಚರ್ಚೆಯಾದ ವಿಷಯವಿದು. ಮುಸ್ಲಿಮರಲ್ಲಿ ಮದುವೆಯಾದ ಹೆಣ್ಣನ್ನು ಅತಿ ಸುಲಭವಾಗಿ 3 ಬಾರಿ ತಲಾಖ್ ಎಂದು ಕೈತೊಳೆದುಕೊಳ್ಳಲು ಅವಕಾಶವಿದೆ. ಇದಕ್ಕೆ ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಕಾಯ್ದೆಯ ಮೂಲಕ ಬ್ರೇಕ್ ಹಾಕಿದ್ದರೂ, ಪರಿಣಾಮ ಇನ್ನೂ ಗೊತ್ತಾಗಿಲ್ಲ. ಹೀಗಿರುವಾಗಲೇ ತಲಾಖ್ ತಲಾಖ್ ತಲಾಖ್ ಎಂಬ ಟೈಟಲ್ಲಿನ ಸಿನಿಮಾ ರಿಲೀಸ್ ಆಗೋಕೆ ಸಿದ್ಧವಾಗಿದೆ.
ಒಮ್ಮೆ ತಲಾಖ್ ಪಡೆದುಕೊಂಡ ಜೋಡಿ ಮತ್ತೊಮ್ಮೆ ಒಟ್ಟಿಗೇ ಬಾಳುವೆ ಮಾಡಲು ಹೊರಟಾಗ ಏನೆಲ್ಲ ಸಮಸ್ಯೆ ಸೃಷ್ಟಿಯಾಗುತ್ತೆ ಅನ್ನೋದನ್ನೇ ಕಥೆಯಾಗಿಸಿದ್ದಾರೆ ನಿರ್ದೇಶಕ ಎನ್.ವೈದ್ಯನಾಥ್. ಆರ್.ಜೆ.ನೇತ್ರಾ ನಾಯಕಿಯಾಗಿರುವ ಚಿತ್ರಕ್ಕೆ ಎಸ್.ಎಸ್.ಸುಭಾಷಿಣಿ ನಿರ್ಮಾಪಕಿ.
ಅಂದಹಾಗೆ ಇಲ್ಲಿ ಒಂದು ಚಾಲೆಂಜ್ ಇದೆ. ಮುಸ್ಲಿಂ ಧರ್ಮದ ಬಗ್ಗೆ ಪ್ರಶ್ನೆ ಎತ್ತಿರುವ ಸಿನಿಮಾಗಳು ರಿಲೀಸ್ ಆಗುವುದು ಸುಲಭವಲ್ಲ. ಅದು ಪಾಸಿಟಿವ್ ಅಥವಾ ನೆಗೆಟಿವ್.. ಏನೇ ಇದ್ದರೂ ಮುಸ್ಲಿಮರು ವಿಷಯವನ್ನು ಸೂಕ್ಷ್ಮವಾಗಿ ಮತ್ತು ಅಷ್ಟೇ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಇದು ವಾಸ್ತವ. ಹೀಗಿರೋವಾಗ ತಲಾಖ್ ತಲಾಖ್ ತಲಾಖ್ ಸಿನಿಮಾ ಏನಾಗಬಹುದು..? ರಿಲೀಸ್ ಆಗುತ್ತಾ..?