ಪಾತ್ರ ಚೆನ್ನಾಗಿದೆ, ಅಭಿನಯಕ್ಕೆ ಸ್ಕೋಪ್ ಇದೆ, ಎಕ್ಸ್‍ಪೆರಿಮೆಂಟ್ ಮಾಡೋಕೆ ಅವಕಾಶವಿದೆ.. ಎನಿಸಿದರೆ ಹೀರೋನಾ..? ವಿಲನ್ನಾ..? ಪೋಷಕ ಪಾತ್ರನಾ ಅನ್ನೋದನ್ನೂ ನೋಡದೆ ಯೆಸ್ ಎನ್ನುವ ಕಿಚ್ಚ ಸುದೀಪ್, ಈ ಬಾರಿ ಭಾರ್ಗವ್ ಭಕ್ಷಿ ಆಗುತ್ತಿದ್ದಾರೆ. ಅದು ಕಬ್ಜ ಚಿತ್ರದಲ್ಲಿ. ಈ ಚಿತ್ರಕ್ಕೆ ಹೀರೋ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು. ಒಟ್ಟು 7 ಭಾಷೆಗಳಲ್ಲಿ ಬರುತ್ತಿರುವ ಸಿನಿಮಾಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.
ಸುದೀಪ್ ಪಾತ್ರ ಏನು..? ಹೀರೋನಾ..? ವಿಲನ್ನಾ..? ಹೇಗಿರುತ್ತೆ ಪಾತ್ರ ಅನ್ನೋದನ್ನು ತೆರೆಯ ಮೇಲೇ ನೋಡಿ ಎಂದಿದ್ದಾರೆ ಚಂದ್ರು.
ಆರ್.ಚಂದ್ರು ಅವರ ಕಥೆ, ತಮ್ಮ ಪಾತ್ರದ ನರೇಷನ್ ಹಾಗೂ ಚಂದ್ರು ಅವರ ಕಬ್ಜ ಮೇಕಿಂಗ್ ನೋಡಿಯೇ ಪಾತ್ರಕ್ಕೆ ಓಕೆ ಎಂದಿದ್ದಾರಂತೆ ಸುದೀಪ್.