Print 
darshan, prajwal devaraj,

User Rating: 0 / 5

Star inactiveStar inactiveStar inactiveStar inactiveStar inactive
 
ಫೆಬ್ರವರಿಯಲ್ಲೇ ಥಿಯೇಟರುಗಳಲ್ಲಿ ದರ್ಶನ್ ದರ್ಶನ..!
Darshan, Prajwal Devaraj

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆರೆಗೆ ಬರೋದು ಮಾರ್ಚ್ 11ಕ್ಕೆ. ಇನ್ನೂ 2 ತಿಂಗಳು ಕಾಯಬೇಕು. ಅಂಥಾದ್ದರಲ್ಲಿ ಫೆಬ್ರವರಿಯಲ್ಲೇ ದರ್ಶನ್ ಥಿಯೇಟರಿಗೆ ಬರ್ತಾರೆ ಅಂದ್ರೆ ದಚ್ಚು ಫ್ಯಾನ್ಸ್ ಥ್ರಿಲ್ಲಾಗೋದು ಪಕ್ಕಾ. ಅಫ್‍ಕೋರ್ಸ್ ದರ್ಶನ್ ಅಭಿಮಾನಿಗಳೆಲ್ಲ ಜೈಜೈಕಾರ ಹಾಕುವಂತ, ಖುಷಿಯಾಗಿ ಶಿಳ್ಳೆ ಹೊಡೆಯುವ ಗೆಟಪ್‍ನಲ್ಲೇ ಬರುತ್ತಿದ್ದಾರೆ, ಅದು ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ಮೂಲಕ.

ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರಕ್ಕೆ ಹೀರೋ ಪ್ರಜ್ವಲ್ ದೇವರಾಜ್, ಹೀರೋಯಿನ್ ಜಾಕಿ ಭಾವನಾ. ನರಸಿಂಹ ನಿರ್ದೇಶಿಸಿರುವ ಚಿತ್ರಕ್ಕೆ ಎ.ಆರ್. ವಿಖ್ಯಾತ್ ನಿರ್ಮಾಪಕ. ಈ ಚಿತ್ರದಲ್ಲಿ ದರ್ಶನ್ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಸ್ನೇಹಕ್ಕಾಗಿ.

ಈ ಚಿತ್ರದಲ್ಲಿ ದರ್ಶನ್ ಭಗತ್ ಸಿಂಗ್ ಗೆಟಪ್‍ನಲ್ಲಿ ನಟಿಸಿದ್ದು, ಡಬ್ಬಿಂಗ್ ಬ್ಯಾಲೆನ್ಸ್ ಇದೆಯಂತೆ. ಫೆಬ್ರವರಿಯಲ್ಲೇ ಬರುತ್ತೇವೆ ಎಂದು ಜಾಹೀರಾತು ಕೊಟ್ಟಿದೆ ಇನ್ಸ್‍ಪೆಕ್ಟರ್ ವಿಕ್ರಂ ಟೀಂ. ಡೇಟ್ ಅನೌನ್ಸ್ ಮಾಡಿಲ್ಲ. ಹಾಗೇನಾದರೂ ಆದರೆ, 2021ರ ಮೊದಲ ಸ್ಟಾರ್ ಸಿನಿಮಾ, ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರವೇ ಆಗಲಿದೆ.