ರಿಷಬ್ ಶೆಟ್ಟಿ ನಿರ್ಮಿಸಿ ನಟಿಸಿರುವ ಸಿನಿಮಾ ಹೀರೋ. ಚಿತ್ರದ ಟ್ರೇಲರ್ ರಿಲೀಸ್ ಆಗಿರೋದಷ್ಟೇ ಅಲ್ಲ, ಚಿತ್ರದ ಕಥೆ ಏನಿರಬಹುದು ಅನ್ನೋ ಕುತೂಹಲವನ್ನಂತೂ ದಂಡಿಯಾಗಿ ಹುಟ್ಟುಹಾಕಿದೆ.
ಮೇಲ್ನೋಟಕ್ಕೆ ಕಾಮಿಡಿ ಥ್ರಿಲ್ಲರ್‍ನಂತೆ ಕಂಡರೂ, ಕಂಪ್ಲೀಟ್ ಕಾಮಿಡಿ ಅನ್ನೋಕಾಗಲ್ಲ, ಸೀರಿಯಸ್‍ನೆಸ್ ಇದೆ. ಹಾಗಂತ ಪೂರ್ತಿ ಸೀರಿಯಸ್ ಅನ್ನೋಕೂ ಸಾಧ್ಯವಿಲ್ಲ. ಇದರ ನಡುವೆ ಅಲ್ಲೊಂದು ಲವ್ ಸ್ಟೋರಿ ಇದ್ದ ಹಾಗಿದೆ. ಮೈನವಿರೇಳಿಸುವ ಆ್ಯಕ್ಷನ್ ಸೀನ್‍ಗಳೂ ಇವೆ.
ರಿಷಬ್ ಶೆಟ್ಟಿ ಹೀರೋ ಆಗಿರುವ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ವಿಲನ್. ಆತನ ಪತ್ನಿಯಾಗಿರೋದು ನಾಯಕಿ ಗಾನವಿ ಗೌಡ. ಆಕೆ ಹೀರೋನ ಪ್ರಿಯತಮೆಯಾ.. ಗೊಂದಲ ಹುಟ್ಟುತ್ತೆ. ಡೈರೆಕ್ಟರ್ ಭರತ್ ರಾಜ್, ಚೆಂದದ ಕಥೆ, ಚಿತ್ರಕಥೆ ಮಾಡಿರುವ ಹಾಗಿದೆ. ಸದ್ಯಕ್ಕೀಗ ಹೀರೋ ಸರ್‍ಪ್ರೈಸ್.