` ಅಯೋಧ್ಯೆ ರಾಮನಿಗೆ ನಟಿ ಪ್ರಣೀತಾ 1 ಲಕ್ಷ ದೇಣಿಗೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಯೋಧ್ಯೆ ರಾಮನಿಗೆ ನಟಿ ಪ್ರಣೀತಾ 1 ಲಕ್ಷ ದೇಣಿಗೆ
Pranitha Subash

ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎನ್ನುವುದು ದೇಶದ ಕೋಟ್ಯಂತರ ಹಿಂದೂಗಳ ಶತಶತಮಾನಗಳ ಕನಸು. ಆ ಕನಸು ಈಗ ಈಡೇರುತ್ತಿದೆ. ಮಂದಿರ ಕಟ್ಟುವ ಕುರಿತು ಇದ್ದ ಎಲ್ಲ ಕಾನೂನು ವಿವಾದಗಳನ್ನೂ ಬಗೆಹರಿಸಿಕೊಂಡ ಮೇಲೆ ರಾಮಮಂದಿರ ಕಟ್ಟುವ ಕೆಲಸ ಶುರುವಾಗಿದೆ. ಈ ಮಂದಿರಕ್ಕೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸುವುದಾಗಿ ಸಂಘಟಕರು ಘೋಷಿಸಿದ್ದಾರೆ. ದೇಣಿಗೆ ನೀಡುವಂತೆ ಭಕ್ತರಿಗೆ ಮನವಿ ಮಾಡಿದ್ದಾರೆ.

ಕನ್ನಡದಲ್ಲಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿರುವುದು ನಟಿ ಪ್ರಣೀತಾ ಸುಭಾಷ್. ಸ್ವತಃ 1 ಲಕ್ಷ ರೂ. ದೇಣಿಗೆ ನೀಡಿ, ಎಲ್ಲರಿಗೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ ಪ್ರಣೀತಾ. ಜೈ ಶ್ರೀರಾಮ್.