ಡಿಂಪಲ್ ಕ್ವೀನ್, ಲಕ್ಕಿ ಕ್ವೀನ್ ಎಂದೆಲ್ಲ ಫೇಮಸ್ ಆಗಿರೋ ಬುಲ್ ಬುಲ್ ರಚಿತಾ ರಾಮ್, ಕನ್ನಡದ ಬಹುತೇಕ ಎಲ್ಲ ಸ್ಟಾರ್‍ಗಳಿಗೂ ನಾಯಕಿಯಾಗಿ ನಟಿಸಿದ್ದಾರೆ. ಯಶ್ ಒಬ್ಬರನ್ನು ಬಿಟ್ಟು. ಈಗ ರಚಿತಾ ರಾಮ್ ಕನ್ನಡದ ಇನ್ನೊಬ್ಬ ಸ್ಟಾರ್ ನಟ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗುತ್ತಿದ್ದಾರೆ.
ಲವ್ ಮಾಕ್‍ಟೇಲ್ ನಂತರ ತಮ್ಮದೇ ವಿಶಿಷ್ಟ ಫ್ಯಾನ್ಸ್ ಗ್ರೂಪ್ ಸೃಷ್ಟಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ, ರಚಿತಾ ರಾಮ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಕ್ ಗಂಗಾಧರ್ ನಿರ್ದೇಶಕ.
ಅತ್ತ ಮದುವೆ.. ಇತ್ತ ಹೊಸ ಹೊಸ ಸಿನಿಮಾ.. ಎಲ್ಲದರ ನಡುವೆ ಡಾರ್ಲಿಂಗ್ ಕೃಷ್ಣ ಬ್ಯುಸಿಯಾಗಿದ್ದರೆ, ಕೈತುಂಬಾ 10ಕ್ಕೂ ಹೆಚ್ಚು ಸಿನಿಮಾ ಇಟ್ಟುಕೊಂಡಿರೋ ರಚಿತಾ ರಾಮ್ ಇನ್ನಷ್ಟು ಬ್ಯುಸಿಯಾಗುತ್ತಲೇ ಇದ್ದಾರೆ.