Print 
yash, srinidi shetty, kgf chapter 2,

User Rating: 5 / 5

Star activeStar activeStar activeStar activeStar active
 
10 ಕೋಟಿ ದಾಖಲೆಯತ್ತ ರಾಕಿ ಭಾಯ್
KGF Chapter 2 Image

ಕೆಜಿಎಫ್ ಚಾಪ್ಟರ್ 2 ಟೀಸರ್ ದಾಖಲೆಗಳನ್ನೇ ಸೃಷ್ಟಿಸಿಬಿಟ್ಟಿದೆ. ಲೀಕ್ ಆದರೂ ರೆಕಾರ್ಡುಗಳನ್ನೆಲ್ಲ ಬ್ರೇಕ್ ಮಾಡಿಕೊಂಡು ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2 ಟೀಸರ್, 10 ಕೋಟಿ ವೀಕ್ಷಣೆ ದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ಟೀಸರ್ ಬಿಡುಗಡೆ ಮಾಡಿದ 24 ಗಂಟೆಗಳಲ್ಲೇ 78 ಮಿಲಿಯನ್ ವ್ಯೂವ್ಸ್ ಪಡೆದದ್ದು ರಾಕಿ ಭಾಯ್ ಹೆಗ್ಗಳಿಕೆ.

ಒಂದು ಮಿಲಿಯನ್ ಅಂದರೆ 10 ಲಕ್ಷ. ಈಗಾಗಲೇ 85 ಮಿಲಿಯನ್ ವೀಕ್ಷಕರ ಸಂಖ್ಯೆ ದಾಟಿದೆ. ಅಂದರೆ ಎಂಟೂವರೆ ಕೋಟಿ ವೀಕ್ಷಣೆಯ ದಾಖಲೆ. ಕನ್ನಡದ ಮಟ್ಟಿಗಂತೂ ಇದು ಅದ್ಭುತ ದಾಖಲೆಯೇ ಸರಿ.

ಪ್ರಶಾಂತ್ ನೀಲ್ ಟಚ್ ಇರೋ ಟೀಸರಿನಲ್ಲಿ ಸಂಜಯ್ ದತ್ ಮುಖವನ್ನೇ ತೋರಿಸಲ್ಲ. ರವೀನಾ ಟಂಡನ್ ಅವರ ಮೆಚ್ಯೂರ್ಡ್ ಲುಕ್ ಗಮನ ಸೆಳೆಯುತ್ತೆ. ಶ್ರೀನಿಧಿ ಶೆಟ್ಟಿ ಸೌಂದರ್ಯ ದೇವತೆಯಂತೆ ಕಂಡರೆ, ಅವರೆಲ್ಲರನ್ನೂ ಸುಟ್ಟು ಬಿಡುವಂತೆ ಕೆಂಡದಂತೆ ಹೊಳೆಯುತ್ತಾನೆ ರಾಕಿ ಬಾಯ್. ಬೆನ್ನಲ್ಲಿ ಕೇಳಿಸೋದು ಪ್ರಕಾಶ್ ರೈ ವಾಯ್ಸ್. ಅನಂತ್‍ನಾಗ್ ಇಲ್ಲಿ ಇಲ್ಲ.

ಟೋಟಲ್ ಆಗಿ ಖಡಕ್ಕಾಗಿರೋ ಟೀಸರ್ 10 ಕೋಟಿ ದಾಟೋದು ಪಕ್ಕಾ. ಅಲ್ಲಿಗೆ ಹೊಸ ಇತಿಹಾಸ ಸೃಷ್ಟಿಯಾಗೋದು ಕೂಡಾ ಪಕ್ಕಾ.