ಕೆಜಿಎಫ್ ರಿಲೀಸ್ ಆದ ದಿನದಿಂದ ಶುರುವಾದ ದಾಖಲೆಗಳನ್ನು ಬ್ರೇಕ್ ಮಾಡುವ ದಾಖಲೆ ಅವ್ಯಾಹತವಾಗಿ ಕಂಟಿನ್ಯೂ ಆಗ್ತಿದೆ. ಕೆಜಿಎಫ್ ಚಾಪ್ಟರ್ 1 ಹಿಟ್ ಆದ ನಂತರ ಸಹಜವಾಗಿಯೇ ಇಂಡಿಯಾ ಲೆವೆಲ್ಲಿನಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಕೆಜಿಎಫ್ ಚಾಪ್ಟರ್ 2, ಮೊದಲ ಟೀಸರ್ನಲ್ಲಿಯೂ ದಾಖಲೆ ಬರೆದಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ಜರುಗಿದ್ದರೆ ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 12 ನಿಮಿಷಕ್ಕೆ ರಿಲೀಸ್ ಆಗಬೇಕಿದ್ದ ಟೀಸರ್, ಹಿಂದಿನ ರಾತ್ರಿಯೇ ರಿಲೀಸ್ ಆಗಬೇಕಾಯ್ತು. 11 ಗಂಟೆ ಮೊದಲೇ ರಿಲೀಸ್ ಆದ ಟೀಸರ್ ದಾಖಲೆಗಳನ್ನು ಚಿಂದಿ ಉಡಾಯಿಸುತ್ತಿದೆ.
ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹೆಚ್ಚೂ ಕಡಿಮೆ 2 ಕೋಟಿ ಜನ ಟೀಸರ್ ನೋಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್.. ಹೀಗೆ ಕೆಜಿಎಫ್ ಚಾಪ್ಟರ್ 2 ತಂಡದ ಪ್ರತಿಯೊಬ್ಬರೂ ಥ್ರಿಲ್ಲಾಗುವಂತಾ ದಾಖಲೆ ಇದು. ಅಫ್ಕೋರ್ಸ್.. ಕೆಜಿಎಫ್ ಚಾಪ್ಟರ್ 1 ಸೃಷ್ಟಿಸಿದ್ದ ಹವಾ ಅಂಥಾದ್ದು. ಶೀಘ್ರದಲ್ಲೇ ಥಿಯೇಟರಿಗೆ ಬರೋದಾಗಿ ಘೋಷಿಸಿರೋ ಕೆಜಿಎಫ್ ಟೀಂ, ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಲಗ್ಗೆಯಿಡೋ ಚಾನ್ಸ್ ಇದೆ. ಯಶ್ ಹುಟ್ಟುಹಬ್ಬಕ್ಕೆಂದೇ ಟೀಸರ್ ಬಿಟ್ಟಿರೋ ಚಿತ್ರತಂಡ, ಯಶ್, ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಯಶ್ ಅವರ 35ನೇ ಹುಟ್ಟುಹಬ್ಬಕ್ಕೆಂದೇ ರಿಲೀಸ್ ಆದ ಟೀಸರ್ ಇದು. ಎಲ್ಲ ಭಾಷೆಗಳಿಗೂ ಅನ್ವಯಾಗುವಂತೆ ಡೈಲಾಗ್ಗಳಿಲ್ಲದ ಒಂದೇ ಟೀಸರ್ ಬಿಟ್ಟಿದೆ ಕೆಜಿಎಫ್ ಟೀಂ. ಗುಡ್ ಲಕ್