` ವಿಕ್ಟರಿ ವೆಂಕಟೇಶ್`ಗೆ ವಸಿಷ್ಠ ಸಿಂಹ ವಿಲನ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
 ವಿಕ್ಟರಿ ವೆಂಕಟೇಶ್`ಗೆ ವಸಿಷ್ಠ ಸಿಂಹ ವಿಲನ್..!
Vasishta Simha

ತೆಲುಗಿನಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಸ್ಟಾರ್ ನಟರಲ್ಲಿ ವಿಕ್ಟರಿ ವೆಂಕಟೇಶ್ ಅವರದ್ದು ದೊಡ್ಡ ಹೆಸರು. ಅವರೀಗ ತಮಿಳಿನ ಅಸುರನ್ ಚಿತ್ರವನ್ನು ರೀಮೇಕ್ ಮಾಡುತ್ತಿದ್ದಾರೆ. ನಾರಪ್ಪ ಚಿತ್ರದ ಟೈಟಲ್. ವಿಶೇಷವೆಂದರೆ ಆ ಚಿತ್ರದ ವಿಲನ್ ರೋಲ್`ಗೆ ಸೆಲೆಕ್ಟ್ ಆಗಿರುವುದು ಕನ್ನಡದ ಹುಡುಗ ವಸಿಷ್ಠ ಸಿಂಹ.

ತಮ್ಮ ವಿಶಿಷ್ಟ ಧ್ವನಿ, ಕಣ್ಣುಗಳಲ್ಲೇ ಅಭಿನಯಿಸುವ ಶಕ್ತಿಯಿಂದ ಗುರುತಿಸಿಕೊಂಡವರು ವಸಿಷ್ಠ. ನಾರಪ್ಪ ಚಿತ್ರದ ಪ್ರಮುಖ ಪಾತ್ರಕ್ಕೆ ಅವಕಾಶ ಸಿಕ್ಕೋದಕ್ಕೂ ಅದೇ ಕಾರಣ. ಹಾಗಂತ ವಸಿಷ್ಠಗೆ ತೆಲುಗಿನಲ್ಲಿ ಇದು ಮೊದಲನೇ ಸಿನಿಮಾ ಏನಲ್ಲ. ಮೂರನೆಯದ್ದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery