` ಹಲೋ ಡಿ ಬಾಸ್ ಫ್ಯಾನ್ಸ್, ಜನವರಿ 10ಕ್ಕೆ ಗೆಟ್ ರೆಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹಲೋ ಡಿ ಬಾಸ್ ಫ್ಯಾನ್ಸ್, ಜನವರಿ 10ಕ್ಕೆ ಗೆಟ್ ರೆಡಿ
Darshan Image

ದರ್ಶನ್ ಫ್ಯಾನ್ಸ್ ಜನವರಿ 10ನೇ ತಾರೀಕನ್ನು ಎದುರು ನೋಡುವಂತಾಗಿದೆ. ಆ ದಿನ ಏನು ವಿಶೇಷ ಅನ್ನೋದು ಅವರಿಗೂ ಗೊತ್ತಿಲ್ಲ. ಆದರೆ, ಅವರೆಲ್ಲ ಕಾದು ಕುಳಿತುಕೊಳ್ಳೋದಂತೂ ಪಕ್ಕಾ. ಯಾಕಂದ್ರೆ, ಅವತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ ಬುಕ್ ಲೈವ್ ಬರಲಿದ್ದಾರೆ.

ಬೆಳಗ್ಗೆ 11 ಗಂಟೆಗೆಲ್ಲ ದರ್ಶನ್ ಲೈವ್ ಬರುತ್ತಾರೆ ಅನ್ನೋ ಮಾಹಿತಿ ನೀಡಿರೋದು ದರ್ಶನ್ ಅಭಿಮಾನಿಗಳ ಪೇಜ್ ಡಿ ಕಂಪೆನಿ. ಆ ದಿನ ದರ್ಶನ್ ಏನು ಮಾತನಾಡ್ತಾರೆ..?

ರಾಬರ್ಟ್ ಬಗ್ಗೆ ಮಾತನಾಡ್ತಾರಾ..? ಗಂಡುಗಲಿ ಮದಕರಿ ನಾಯಕ ಚಿತ್ರದ ಬಗ್ಗೆ ಮಾತನಾಡ್ತಾರಾ..? ಅಥವಾ ಈ ಎರಡನ್ನೂ ಬಿಟ್ಟು ಹೊಸ ವಿಷಯದ ಬಗ್ಗೆ ಮಾತನಾಡ್ತಾರಾ..? ವೇಯ್ಟ್.. ವೇಯ್ಟ್.. ವೇಯ್ಟ್..