ಕನ್ನಡಕ್ಕೆ ಬೇರೆ ಭಾಷೆಯ ನಟ, ನಟಿಯರು ಬರುವುದು ಹೊಸದೇನಲ್ಲ. ಆದರೆ ಕೆಲವರು ಬಂದು ಹೋದ ಮೇಲೆ ಕೆಟ್ಟದನ್ನು ಹೇಳೋದೇ ಹೆಚ್ಚು. ಈ ಹಿಂದೆ ಉಪೇಂದ್ರ ಚಿತ್ರಕ್ಕೆ ಬಂದು ಹೋಗಿದ್ದ ರವೀನಾ, ಕನ್ನಡ ಚಿತ್ರರಂಗದ ಬಗ್ಗೆ ಒಳ್ಳೆಯ ಮಾತುಗಳನ್ನೇನೂ ಆಡಿರಲಿಲ್ಲ. ಆದರೆ, ಈಗ ಕೆಜಿಎಫ್ ಚಾಪ್ಟರ್-2ಗೆ ಬಂದಿರೋ ವೀನಾ ಟಂಡನ್, ಚಿತ್ರ, ನಿರ್ದೇಶಕ ಮತ್ತು ನಾಯಕ ನಟನನ್ನು ಹಾಡಿ ಹೊಗಳಿದ್ದಾರೆ.
ಕೆಜಿಎಫ್ 1 ನೋಡೋದಕ್ಕೂ ಮುನ್ನವೇ ಕೆಜಿಎಫ್ 2 ಮತ್ತು ನನ್ನ ಪಾತ್ರದ ಬಗ್ಗೆ ಕೇಳಿದ್ದೆ. ಆನಂತರ ಪ್ರಶಾಂತ್ ನೀಲ್ ಚಿತ್ರಕಥೆಯ ರೀಡಿಂಗ್ ಕೊಟ್ಟರು. ಕಥೆ ಮತ್ತು ಪಾತ್ರ ಇಷ್ಟವಾಯಿತು. ಕೆಜಿಎಫ್ 1 ನೋಡಿದ ಮೇಲಂತೂ, ಸಿನಿಮಾವನ್ನು ಡ್ರಾಪ್ ಮಾಡಲು ಯಾವುದೇ ಕಾರಣ ನನಗೆ ಸಿಗಲಿಲ್ಲ ಎಂದಿರೋ ರವೀನಾ ಟಂಡನ್ ಕಣ್ಣಿಗೆ ಪ್ರಶಾಂತ್ ನೀಲ್ ಸ್ಪೆಷಲ್ ಡೈರೆಕ್ಟರ್.
ಅವರ ಕೂಲ್ ಕಣ್ಣಲ್ಲಿ ಏನೇನೆಲ್ಲ ಓಡುತ್ತೆ ಅನ್ನೋದನ್ನು ಊಹಿಸೋಕೂ ಸಾಧ್ಯವಿಲ್ಲ ಅನ್ನೋ ರವೀನಾ ಟಂಡನ್, ತಮ್ಮ ರಮಿಕಾ ಸೇನ್ ಪಾತ್ರವನ್ನು ನೀವ್ಯಾರೂ ಊಹಿಸೋಕೆ ಸಾಧ್ಯವಿಲ್ಲ ಎನ್ನುತ್ತಾರೆ.
ನಟ ಯಶ್ ಪ್ರತಿಭಾವಂತ, ಅವರ ಜೊತೆ ಕೆಲಸ ಮಾಡುವುದು ವಿಶಿಷ್ಟ ಅನುಭವ ಅನ್ನೋದು ರವೀನಾ ಟಂಡನ್ ಮಾತು.