ರಜನಿಕಾಂತ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..? ಇದು ಒಂದೆರಡು ದಿನ, ತಿಂಗಳು, ವರ್ಷಗಳ ಪ್ರಶ್ನೆಯಲ್ಲ. ದಶಕಗಳ ಪ್ರಶ್ನೆ ಮತ್ತು ಕುತೂಹಲ. ಈ ಕುತೂಹಲವನ್ನು ಕಾಯ್ದುಕೊಂಡೇ ಬಂದಿದ್ದ, ಇದೇ ಡಿ.31ರಂದು ಹೊಸ ಪಕ್ಷ ಘೋಷಿಸುವುದಾಗಿ ಹೇಳಿ ಸಂಚಲನ ಸೃಷ್ಟಿಸಿದ್ದ ರಜನಿ, ಈಗ ರಾಜಕೀಯವೇ ಬೇಡ ಎಂದು ಹಿಂದೆ ಸರಿದಿದ್ದಾರೆ.
ಹೊಸ ಚಿತ್ರದ ಚಿತ್ರೀಕರಣ ವೇಳೆ ಟೀಂನಲ್ಲಿದ್ದ ನಾಲ್ವರಿಗೆ ಕೊರೊನಾ ಬಂತು. ಹೀಗಾಗಿ ಎಲ್ಲರೂ ಟೆಸ್ಟ್‍ಗೆ ಹೋದರು. ರಜನಿಗೆ ಕೊರೊನಾ ನೆಗೆಟಿವ್ ಇತ್ತು. ಆದರೆ ಬಿಪಿ ಹೈಲೆವೆಲ್‍ನಲ್ಲಿತ್ತು. ರಜನಿ ಈಗ ಬದುಕುತ್ತಿರುವುದು ಕಸಿ ಮಾಡಿದ ಕಿಡ್ನಿಗಳಿಂದ. ಬಿಪಿ ಹೆಚ್ಚಾದರೆ ಆ ಕಿಡ್ನಿಗಳಿಗೆ ಡೇಂಜರ್. ಇದೆಲ್ಲವೂ ಗೊತ್ತಾದ ನಂತರ ರಜನಿ ಈ ನಿರ್ಧಾರ ಕೈಗೊಂಡಿದ್ದಾರೆ.
120 ಜನರ ಮಧ್ಯೆಯೇ ಬಿಪಿ ಹೆಚ್ಚಾಗುವಂತ ಆರೋಗ್ಯ ಇರುವಾಗ, ರಾಜಕೀಯಕ್ಕೆ ಬಂದು ಲಕ್ಷಾಂತರ ಜನರ ಮಧ್ಯೆ ಓಡಾಡುವುದು ಸಾಧ್ಯವಿಲ್ಲದ ಮಾತು. ಹೀಗಾಗಿ ನಾನು ರಾಜಕೀಯಕ್ಕೆ ಬರುತ್ತಿಲ್ಲ. ಕ್ಷಮಿಸಿ ಎಂದಿದ್ದಾರೆ ರಜನಿ.