` ಜೈ ಮುಂಗಾರು ಮಳೆ.. ಜೈ ಜನತೆ.. ಜೈ ಜೀವನ.. : ಗಣಪ-ಯೋಗ್ರಾಜ್ ಭಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Mungaru Male Completes 14 Years
Pooja Gnadhi, Ganesh Image from Mungaru Male

ಡಿಸೆಂಬರ್ 29, 2004. ಆ ಚಿತ್ರವೂ ರಿಲೀಸ್ ಆಗಿತ್ತು. ಇಬ್ಬರು ಸ್ಟಾರ್‍ಗಳೂ ಉದಯಿಸಿದ್ದರು. ಆ ಚಿತ್ರಕ್ಕೀಗ 14ನೇ ವರ್ಷದ ಮುಂಗಾರು. ಕನ್ನಡ ಚಿತ್ರರಂಗದಲ್ಲಿ ಸಿಡಿಲು, ಗುಡುಗು ಇಲ್ಲದೆಯೇ ಮಿಂಚು ಹರಿಸಿದ, ದಾಖಲೆಗಳ ಪ್ರವಾಹ ಸೃಷ್ಟಿಸಿದ ಮುಂಗಾರು ಮಳೆಯ 14ನೇ ಹುಟ್ಟುಹಬ್ಬವನ್ನು ಯೋಗರಾಜ್ ಭಟ್ ಮತ್ತು ಗಣೇಶ್ ಇಬ್ಬರೂ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ನಾವಿಬ್ಬರೂ.. ಜೊತೆಗೆ ಇಡೀ ತಂಡ

ಆಗ ತಾನೇ ಕಣ್ತೆರೆದ

ಶಿಶುಗಳಂತೆ ಮಂಗಾರು ಮಳೆ

ಚಿತ್ರ ಮಾಡಿ, ಜನತೆಗೆ ಅರ್ಪಿಸಿ

ಇಂದಿಗೆ 14 ವರ್ಷಗಳಾಗಿವೆ.

ಚಿತ್ರಕ್ಕಷ್ಟೇ ಅಲ್ಲದೆ.. ನಮ್ಮಿಬ್ಬರಿಗೂ

ಇದು ಒಂದು ರೀತಿಯ ಹುಟ್ಟುಹಬ್ಬ

ಕೆಲಸ ಕಲಿಸಿದ, ಬದುಕು ಕೊಟ್ಟ

ಪ್ರೀತಿ ತಿಳಿಸಿದ, ನಾಡು ನಲಿಸಿದ

ಈ ಪ್ರೇಕ್ಷಕರ ಆಸ್ತಿಯಂತಹ

ಮಹಾನ್ ಚಿತ್ರಕ್ಕೆ ನಮ್ಮಿಬ್ಬರ

ದೀರ್ಘದಂಡ ನಮಸ್ಕಾರಗಳು

ಜೈ ಮುಂಗಾರು ಮಳೆ..

ಜೈ ಜನತೆ..

ಜೈ ಜೀವನ..

ಗಣಪ-ಯೋಗ್ರಾಜ್ ಭಟ್