ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಅದ್ಧೂರಿ ಸಿನಿಮಾ ಮದಗಜ ಸಿನಿಮಾ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿಗೂ ನುಗ್ಗುತ್ತಿದೆ. ಕೆಜಿಎಫ್ ಚಾಪ್ಟರ್ 2, ಯುವರತ್ನದ ಹಿಂದೆಯೇ ಮದಗಜ ಕೂಡಾ ತೆಲುಗಿನಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿದೆ.
ಜನವರಿ 1ರ ಹೊಸ ವರ್ಷದ ದಿನ ಮದಗಜ, ರೋರಿಂಗ್ ಮದಗಜ ಟೈಟಲ್‍ನಲ್ಲಿ ತೆಲುಗಿನವರಿಗೆ ಪರಿಚಯವಾಗಲಿದೆ. ತೆಲುಗಿನಲ್ಲಿ ಆ ದಿನ ಟೀಸರ್ ಲಾಂಚ್.
ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರಕ್ಕೆ ಉಮಾಪತಿ ನಿರ್ಮಾಪಕ. ಅಶಿಕಾ ರಂಗನಾಥ್ ನಾಯಕಿ. ಕ್ರಿಸ್‍ಮಸ್ ದಿನ ತೆಲುಗಿನ ಪೋಸ್ಟರ್ ಲಾಂಚ್ ಮಾಡಲಾಗಿದ್ದು, ಹೊಸ ವರ್ಷದ ದಿನ ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್‍ನಲ್ಲಿ ಟೀಸರ್ ಲಾಂಚ್ ಆಗಲಿದೆ.
ಅಷ್ಟೇ ಅಲ್ಲ, ತೆಲುಗಿನ ನಂತರ ತಮಿಳು, ಹಿಂದಿ, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಸದ್ಯಕ್ಕೆ ತೆಲುಗಿನ ಟೀಸರ್ ಲಾಂಚ್ ಆಗಲಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ್. ಈಗಾಗಲೇ ಚಿತ್ರದ ಶೇ.80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು 20% ಶೂಟಿಂಗ್ ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಏಪ್ರಿಲ್ ಅಥವಾ ಮೇ ಹೊತ್ತಿಗೆ ಥಿಯೇಟರಿಗೆ ಬರುತ್ತೇವೆ ಎನ್ನುವುದು ಮಹೇಶ್ ಮಾತು.