` 100 ಮಿಲಿಯನ್ ಅಲೆಲೆಲೆಲೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
100 ಮಿಲಿಯನ್ ಅಲೆಲೆಲೆಲೆ..
Kirik Party Movie Image

ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ.. ಹಾಡು ಆಗ ಸೃಷ್ಟಿಸಿದ್ದ ರೋಮಾಂಚನ ಅಷ್ಟಿಷ್ಟಲ್ಲ. ಆ ರೋಮಾಂಚನ ಇಂದಿಗೂ ನಿಂತಿಲ್ಲ. ರೋಮಾಂಚನಗೊಳ್ಳುವವರ ಸಂಖ್ಯೆ ಏರುತ್ತಲೇ ಇದೆ ಅನ್ನೋದಕ್ಕೆ ಇಲ್ಲಿದೆ ಹೊಸ ಸಾಕ್ಷಿ.

2016ರಲ್ಲಿ ರಿಲೀಸ್ ಆಗಿ, ಬಾಕ್ಸಾಫೀಸ್‍ನಲ್ಲಿ ಅರೆರೆರೆರೆ ಎನ್ನುವ ಸಾಧನೆ ಮಾಡಿದ್ದ ಕಿರಿಕ್ ಪಾರ್ಟಿಯ ಈ ಹಾಡು ಈಗ ಇನ್ನೊಂದು ದಾಖಲೆ ಬರೆದಿದೆ. ಈ ಹಾಡನ್ನು ನೋಡಿದವರ ಸಂಖ್ಯೆ ಈಗ 100 ಕೋಟಿ ದಾಟಿದೆ. 4 ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ವ್ಯೂವ್ಸ್ ಪಡೆದಿರುವ ಹಾಡು, ಮೂರೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿದೆ.

ಅಂದಹಾಗೆ ಈ ಹಾಡಿನ ಸಂಗೀತ ಬ್ರಹ್ಮ ಅಜನೀಶ್ ಲೋಕನಾಥ್. ಹಾಡಿನಲ್ಲಿ ಮಿಂಚಿದ್ದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಆದರೂ, ಅವರಿಬ್ಬರಿಗೆ ಮಿಂಚಿನ ಬೆಳಕು ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ. ಧನಂಜಯ್ ರಂಜನ್ ಸಾಹಿತ್ಯದ ಹಾಡಿಗೆ ಧ್ವನಿ ನೀಡಿದ್ದು ವಿಜಯ್ ಪ್ರಕಾಶ್. ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಸ್ವತಃ ರಕ್ಷಿತ್ ಶೆಟ್ಟಿ ಮತ್ತು ಸತೀಶ್ ಕುಮಾರ್.

ಹಾಡಿನಲ್ಲಿ ಕಾಣಿಸಿದ್ದು ಕೇವಲ ರಕ್ಷಿತ್, ರಶ್ಮಿಕಾ ಅಲ್ಲ, ಅರವಿಂದ್ ಅಯ್ಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್, ಶಂಕರ್ ಮೂರ್ತಿ ಕೂಡಾ ಹಾಡಿನಲ್ಲಿ ನಟಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery