` ಜನವರಿ 8ಕ್ಕೆ ಕೆಜಿಎಫ್ 2 ಟೀಸರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kgf chapter 2 teaser on jan 8th
KGF Chapter 2 Image

ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್.. ಅಭಿಮಾನಿಗಳನ್ನು ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕೊನೆಗೂ ಒಂದು ಥ್ರಿಲ್ ಕೊಡೋಕೆ ಮನಸ್ಸು ಮಾಡಿದ್ದಾರೆ. ಜನವರಿ 8ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಇದು ಈ ಚಿತ್ರದ ಮೊದಲ ಟೀಸರ್ ಅನ್ನೋದು ನೆನಪಿನಲ್ಲಿರಲಿ.

ಏಕೆಂದರೆ ಇದುವರೆಗೆ ಪ್ರಶಾಂತ್ ನೀಲ್ ತೋರಿಸಿರೋದು ಒಂದು ಪೋಸ್ಟರ್ ಮಾತ್ರ. ಅದೊಂದು ದೊಡ್ಡ ಸಾಮ್ರಾಜ್ಯ. ಅದನ್ನು ಸೃಷ್ಟಿಸಲು ನಾವು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದೇವೆ. ಮತ್ತಷ್ಟು ಬಲಿಷ್ಠರಾಗಿ, ದೊಡ್ಡದಾಗಿ ಬರುತ್ತಿದ್ದೇವೆ ಎಂದಿದ್ದಾರೆ ಪ್ರಶಾಂತ್.

ಅಭಿಮಾನಿಗಳು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಅಂದಹಾಗೆ.. ಜನವರಿ 8, ಯಶ್ ಹುಟ್ಟುಹಬ್ಬ. ಸ್ಸೋ.. ಇದು ಬರ್ತ್ ಡೇ ಗಿಫ್ಟ್.