ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ಮಾಡಿ ಹೊಂಚು ಹಾಕಿದ್ದ 7 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ಉಮಾಪತಿ, ಅವರ ತಮ್ಮ ದೀಪಕ್, ಕುಖ್ಯಾತ ರೌಡಿ ಸೈಕಲ್ ರವಿ, ಅವನ ಸಹಚರ ಬೇಕರಿ ರಘು ಹೀಗೆ ಒಟ್ಟು 4 ಮಂದಿ ಹಂತಕರ ಹಿಟ್ ಲಿಸ್ಟ್ನಲ್ಲಿದ್ದರು.
ನ್ಯಾಷನಲ್ ಕಾಲೇಜ್ ಬಳಿ ಇರೋ ರಜತಾದ್ರಿ ಹೋಟೆಲ್ ಮುಂಭಾಗ ಹಂತಕರು ಸ್ಕೆಚ್ ಹಾಕಿ ಕಾದಿದ್ದರು. ಟೆಂಪೋ ಟ್ರಾವೆಲರ್ನಲ್ಲಿ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರಗಳೂ ರೆಡಿ ಇದ್ದವು. ಬೆಳಗ್ಗೆ 5 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಜೀಪಿನಲ್ಲಿ ಫಾಲೋ ಮಾಡಿದ ಪೊಲೀಸರು, ಟಿಟಿಯನ್ನು ಅಡ್ಡ ಹಾಕಿದಾಗ ಪೊಲೀಸರ ಮೇಲೂ ಲಾಂಗು ಬೀಸಿದ್ದರು ಹಂತಕರು.
ರೌಡಿಶೀಟರ್ ಭರತ್ ಕುಮಾರ್, ಪಳನಿ ಗ್ಯಾಂಗ್ನ ಮಂಜುನಾಥ್ ಸೇರಿದಂತೆ ಒಟ್ಟು 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಕರಣ ಸಾಕಷ್ಟು ನಿಗೂಢವಾಗಿದ್ದು, ನಾಲ್ವರ ಹತ್ಯೆಗೆ ಸ್ಕೆಚ್ ಹಾಕಿದ್ದೇಕೆ ಎಂಬುದು ತಿಳಿಯಬೇಕಿದೆ.