ಉಗ್ರಂ, ಮಫ್ತಿ ನಂತರ ಮತ್ತೊಮ್ಮೆ ಅದೇ ಶೇಡ್‍ನಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಈ ಬಾರಿ ಕನ್ನಡದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ. ಶ್ರೀಮುರಳಿಯ ಬಘೀರ ಚಿತ್ರಕ್ಕೆ ಡೈರೆಕ್ಟರ್ ಪ್ರಶಾಂತ್ ನೀಲ್ ಅಲ್ಲ. ಆದರೆ, ಕಥೆ, ಚಿತ್ರಕಥೆ ಅವರದ್ದೇ. ನಿರ್ದೇಶಕರಾಗಿರುವುದು ಯಶ್-ರಮ್ಯಾ ಜೋಡಿಯ ಲಕ್ಕಿ ಚಿತ್ರದ ಖ್ಯಾತಿಯ ಡಾ.ಸೂರಿ.
ಯುವರತ್ನ, ಕೆಜಿಎಫ್ ಚಾಪ್ಟರ್ 2, ಸಲಾರ್‍ನಂತರ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಘೀರನಿಗೆ ಬಂಡವಾಳ ಹೂಡುತ್ತಿದೆ.
ಇಡೀ ಸಮಾಜವೇ ಅರಣ್ಯವಾದಾಗ, ಒಬ್ಬನೇ ಒಬ್ಬ ರಕ್ಷಕ ನ್ಯಾಯಕ್ಕಾಗಿ ಘರ್ಜಿಸುತ್ತಾನೆ ಅನ್ನೋ ಟ್ಯಾಗ್‍ಲೈನ್ ಬೇರೆ ಇದೆ. ಡೌಟೇ ಇಲ್ಲದಂತೆ ಇದೊಂದು ಆಕ್ಷನ್ ಡ್ರಾಮಾ.