ಶ್ರೀಮುರಳಿ ಅವರ ಸ್ಪೆಷಾಲಿಟಿ ಅವರ ವಾಯ್ಸ್ ಮತ್ತು ಗತ್ತು. ಆ ಗತ್ತಿನ ಧ್ವನಿಯಲ್ಲೇ ಭರ್ಜರಿ ಆಟವಾಡಿಬಿಟ್ಟಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ಪಂದ್ಯ ಗೆಲ್ಲೋಕೆ ಆಟವಾಡುವವನು ಪಾಯಿಂಟ್ಸ್‍ಗಾಗಿ ಹೊಡೀತಾನಂತೆ.. ಆದರೆ ಗೆಲ್ಲೋಕೆ ಅಂತಾನೇ ಬರೋವ್ನು ಪಾಯಿಂಟಲ್ಲೇ ಹೊಡೀತಾನಂತೆ..
ಈ ಅರ್ಥದ ಡೈಲಾಗ್‍ನ್ನು ಶ್ರೀಮುರಳಿ ವಾಯ್ಸ್‍ನಲ್ಲಿ ಅಷ್ಟೇ ಖಡಕ್ಕಾಗಿ ಕೂರಿಸಿದ್ದಾರೆ ನಿರ್ದೇಶಕ ಮಹೇಶ್.
ಉಮಾಪತಿ ನಿರ್ಮಾಣದ ಚಿತ್ರದ ಟೀಸರ್ ಹವಾ ಎಬ್ಬಿಸಿರೋದು ಇದೇ ಕಾರಣಕ್ಕೆ. ಮಹೇಶ್, ಶ್ರೀಮುರಳಿ ಕಾಂಬಿನೇಷನ್ನಿನ ಚಿತ್ರದಲ್ಲಿ ಅಶಿಕಾ ರಂಗನಾಥ್ ಹೀರೋಯಿನ್. ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನದ ಮದಗಜ ಕಂಪ್ಲೀಟ್ ಮಾಸ್ ಎಂಟರ್‍ಟೈನರ್.