ಕಾಮಿಡಿ ಸ್ಟಾರ್ ಚಿಕ್ಕಣ್ಣ, ಕೇವಲ ನಟರಷ್ಟೇ ಅಲ್ಲ, ಕೃಷಿ ಉದ್ಯಮಿಯೂ ಆಗುತ್ತಿದ್ದಾರೆ. ಅವರೀಗ ನಾಟಿಕೋಳಿ ಮತ್ತು ಕುರಿ, ಮೇಕೆಗಳ ಫಾರ್ಮ್ ಮಾಡಿದ್ದಾರೆ. ನಾಟಿಕೋಳಿಗೆ ತುಂಬಾ ದೊಡ್ಡ ಮಾರುಕಟ್ಟೆ ಇದೆ. ಕುರಿ, ಮೇಕೆ ಮಾಂಸ, ತುಪ್ಪಟಕ್ಕೂ ಒಳ್ಳೆಯ ಬೆಲೆ ಇದೆ. ಹೀಗಾಗಿಯೇ ಚಿಕ್ಕಣ್ಣ ಮೈಸೂರಿನ ಆರ್‍ಟಿ ನಗರದ ಬಳಿ ಚಾಮುಂಡೇಶ್ವರಿ ಕೋಳಿ-ಕುರಿ ಫಾರ್ಮ್ ಮಾಡಿದ್ದಾರೆ.
ಗೆಳೆಯರ ಉನ್ನತಿಯನ್ನು ನೋಡಿ ಸಂಭ್ರಮಿಸುವ ಗುಣದ ದರ್ಶನ್, ಚಿಕ್ಕಣ್ಣ ಅವರ ಸಾಧನೆಯನ್ನೂ ನೋಡಿ ಖುಷಿ ಪಟ್ಟಿದ್ದಾರೆ. ಫಾರ್ಮ್‍ಗೆ ಭೇಟಿ ಕೊಟ್ಟು, ನೋಡಿದ್ದಾರೆ. ಸ್ವತಃ ಪ್ರಾಣಿ ಸಾಕಣಿಕೆಯಲ್ಲಿ ಅನುಭವಿಯಾಗಿರುವ ದರ್ಶನ್, ಕೆಲವು ಸಲಹೆಗಳನ್ನೂ ಕೊಟ್ಟಿದ್ದಾರೆ.
ದರ್ಶನ್, ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿಯವರೊಂದಿಗೆ ಭೇಟಿ ನೀಡಿದ್ದ ದರ್ಶನ್‍ಗೆ, ಚಿಕ್ಕಣ್ಣ ಮುದ್ದಾದ ಕುರಿಮರಿಯೊಂದನ್ನು ಗಿಫ್ಟ್ ನೀಡಿದ್ದಾರೆ.