ಶುಗರ್ ಫ್ಯಾಕ್ಟರಿ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ನಟಿ ಅಮೂಲ್ಯ ಅವರ ಸೋದರ ದೀಪಕ್ ಅರಸ್ ನಿರ್ದೇಶಕ. ಸೋನಲ್ ಮಂಥೆರೋ ನಾಯಕಿ. ಈ ಚಿತ್ರಕ್ಕೀಗ ಇನ್ನೊಬ್ಬ ನಾಯಕಿ ಬಂದಿದ್ದಾರೆ, ಆದ್ವಿತಿ ಶೆಟ್ಟಿ. ಇನ್ನೂ ಒಬ್ಬ ಹೀರೋಯಿನ್ ಆಯ್ಕೆಯಾಗಬೇಕಿದೆ.
ಮನಸಾಲಜಿ ನಂತರ ಶುಗರ್ ಫ್ಯಾಕ್ಟರಿ ನಿರ್ದೇಶಿಸುತ್ತಿರುವ ದೀಪಕ್ ಅರಸ್ಗೆ ಇದು 2ನೇ ಸಿನಿಮಾ. ಗಿರೀಶ್ ಆರ್. ನಿರ್ಮಾಪಕರಾಗಿರುವ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವುದು ಭರ್ಜರಿ ಚೇತನ್.