ಚಿತ್ರಲೋಕ ಡಾಟ್ ಕಾಮ್, ಕನ್ನಡದ ವೆಬ್ಸೈಟ್ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲುಗಳನ್ನೇ ಸೃಷ್ಟಿಸಿದೆ. ಭಾರತದಲ್ಲಿ ಗೂಗಲ್ ಇನ್ನೂ ಕಣ್ಣೇ ಬಿಡದ ಕಾಲದಲ್ಲಿ ಉದ್ಭವವಾದ ವೆಬ್ಸೈಟ್ ಇದು. ಈಗ ಯೂಟ್ಯೂಬ್ನಲ್ಲಿ ಹೊಸದೊಂದು ದಾಖಲೆ ಬರೆದಿದೆ. ಅದು ಸಿಲ್ವರ್ ರೆಕಾರ್ಡ್.
ಯೂಟ್ಯೂಬ್ ಚಾನೆಲ್, ಚಿತ್ರಲೋಕಕ್ಕೆ ಸಿಲ್ವರ್ ಕ್ರಿಯೇಟರ್ ಗೌರವ ನೀಡಿದೆ. ಒಂದು ಲಕ್ಷ ಚಂದಾದಾರರನ್ನು ಪಡೆದುಕೊಂಡಿದ್ದಕ್ಕೆ ಪ್ರತಿಯಾಗಿ ಯೂಟ್ಯೂಬ್ ನೀಡಿರುವ ಗೌರವವಿದು.
ಇತ್ತೀಚೆಗೆ ಚಿತ್ರಲೋಕ ಡಾಟ್ ಕಾಮ್, ಡಾ.ರಾಜ್ ಅಪಹರಣ ಮತ್ತು ಬಿಡುಗಡೆಯ ಸರಣಿ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದಿದೆ. ಹಲವು ವರ್ಷಗಳಿಂದ ಎಲ್ಲೋ ಮರೆತು ಹೋಗಿದ್ದ, ಕೇಳಿಯೇ ಇರದಿದ್ದ ಸಂಗತಿಗಳೆಲ್ಲ ಈಗ ಚಿತ್ರಲೋಕದ ಮೂಲಕ ಜಗತ್ತಿಗೆ ತಿಳಿಯುತ್ತಿವೆ. ಇಂತಹ ವಿಶೇಷ ವರದಿಗಳಿಂದಾಗಿಯೇ ಚಿತ್ರಲೋಕ ಈ ಸಾಧನೆ ಬರೆದಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮತ್ತಷ್ಟು ಸಂಗತಿಗಳನ್ನು ಯೂಟ್ಯೂಬ್ ಚಾನೆಲ್ ಮೂಲಕ ಹೇಳಲಿದ್ದೇನೆ ಎಂದಿದ್ದಾರೆ ಚಿತ್ರಲೋಕ ಡಾಟ್ ಕಾಂ ಸಂಪಾದಕ ಕೆ.ಎಂ.ವೀರೇಶ್. ಅಂದಹಾಗೆ ಈಗ ಚಿತ್ರಲೋಕ ಯೂಟ್ಯೂಬ್ ಸಬ್ಸ್ಕ್ರೈಬರ್ಸ್ ಸಂಖ್ಯೆ 1 ಲಕ್ಷದ 20 ಸಾವಿರವನ್ನೂ ದಾಟಿದೆ.