ಕೋವಿಡ್ ಲಾಕ್ ಡೌನ್ ಮುಗಿದು, ಥಿಯೇಟರುಗಳು ಶುರುವಾದರೂ ಜನ ಥಿಯೇಟರಿಗೆ ಬರುತ್ತಿಲ್ಲ. ಕನ್ನಡದಲ್ಲಿ ಕೆಲವು ಸ್ಟಾರ್ ನಟರ ಚಿತ್ರಗಳು ಸಿದ್ಧವಿದ್ದರೂ ಬಿಡುಗಡೆ ಮಾಡೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಇದು ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಇದೇ ಸಮಸ್ಯೆ ಇದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಎಲ್ಲೆಡೆಯೂ ಇದೇ ಸ್ಥಿತಿ. ಇದರ ಪರಿಣಾಮ, ದೇಶದಾದ್ಯಂತ ಸುಮಾರು 2000 ಸಿನಿಮಾ ಥಿಯೇಟರ್ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ.
ದೇಶದ ಪ್ರಮುಖ ಡೈಲಿ ಬಿಸಿನೆಸ್ ಟುಡೇ ಈ ಬಗ್ಗೆ ವರದಿ ಮಾಡಿದೆ. ಥಿಯೇಟರುಗಳ ನಿರ್ವಹಣಾ ವೆಚ್ಚವೂ ಹುಟ್ಟುತ್ತಿಲ್ಲ. ಸಿನಿಮಾಗಳೂ ಬರುತ್ತಿಲ್ಲ. ಇನ್ನು ಕೆಲವರು ಒಟಿಟಿಗೇ ನೇರವಾಗಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ಥಿಯೇಟರುಗಳನ್ನು ಮುಚ್ಚಿ ಬೇರೆ ಬಿಸಿನೆಸ್ ಮಾಡುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ ಥಿಯೇಟರ್ ಮಾಲೀಕರು. ಇದರ ಪರಿಣಾಮ ದೇಶದಾದ್ಯಂತ 2000ಕ್ಕೂ ಹೆಚ್ಚು ಸ್ಕ್ರೀನ್ ಶಾಶ್ವತವಾಗಿ ಮುಚ್ಚುವ ಆತಂಕವಿದೆ.