ಯುವ ರಣಧೀರ ಕಂಠೀರವ ಚಿತ್ರದ ಟ್ರೇಲರ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಯುವ ರಾಜ್ಕುಮಾರ್, ಅಭಿಮಾನಿಗಳ ಪ್ರೀತಿಯನ್ನಷ್ಟೇ ಅಲ್ಲ, ಚಿತ್ರರಂಗದ ದಿಗ್ಗಜರ ಮೆಚ್ಚುಗೆಯನ್ನೂ ಗಳಿಸಿದ್ದಾರೆ.
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣರಂತಹ ಸೀನಿಯರ್ ನಟರು ಮೆಚ್ಚಿದ ಟೀಸರ್ನ್ನು, ಈಗ ರಾಜಮೌಳಿ ಕೂಡಾ ಮೆಚ್ಚಿ ಕೊಂಡಾಡಿದ್ದಾರೆ.
ಆರ್ಆರ್ಆರ್ ಸಿನಿಮಾ ಸೆಟ್ನಲ್ಲಿ ರಾಜಮೌಳಿಯನ್ನು ಭೇಟಿ ಮಾಡಿರುವ ಯುವರಾಜ್ ಕುಮಾರ್, ಸಿನಿಮಾ ಟೀಸರ್ನ್ನು ತೋರಿಸಿದ್ದಾರೆ. ಟೀಸರ್ ನೋಡಿ ಶಹಬ್ಬಾಸ್ ಎಂದು ಬೆನ್ನು ತಟ್ಟಿದರಂತೆ ರಾಜಮೌಳಿ. ಸಿನಿಮಾದ ನಿರ್ದೇಶಕ ರುದ್ರನಾಗ್ ಅವರ ಕೌಶಲ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಜಮೌಳಿ.