ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ಲ. ಈಗ ತಾನೇ ಅಂತಿಮ ಹಂತದ ಚಿತ್ರೀಕರಣ ಶುರುವಾಗಿದ್ದು, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಡಿಸೆಂಬರ್ 2ನೇ ವಾರದಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಉತ್ಸಾಹದಲ್ಲಿದೆ ಚಿತ್ರತಂಡ. ಚಿತ್ರೀಕರಣಕ್ಕಾಗಿ ರಾಕಿಭಾಯ್ ಯಶ್ ಹೈದರಾಬಾದ್ ತಲುಪಿದ್ದಾರೆ.
ಆಗಸ್ಟ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ಶುರು ಮಾಡಿತ್ತು. ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ ಬಂದಿದ್ದರು. ಇದರ ನಡುವೆ ಸಂಜಯ್ ದತ್, ಕ್ಯಾನ್ಸರ್ ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ ಕಾರಣ, ಶೂಟಿಂಗ್ ಮತ್ತೆ ವಿಳಂಬವಾಗಿತ್ತು. ಈಗ ಎಲ್ಲದಕ್ಕೂ ಸಮಯ ಕೂಡಿ ಬಂದಂತಿದ್ದು, ಪ್ರಶಾಂತ್ ನೀಲ್ ಅಂತಿಮ ಹಂತದ ಶೂಟಿಂಗ್‍ಗೆ ಸಜ್ಜಾಗುತ್ತಿದ್ದಾರೆ.