ಕೆಜಿಎಫ್ ಅಬ್ಬರಿಸಿತು. ಅವನೇ ಶ್ರೀಮನ್ನಾರಾಯಣ ಕಂಗೊಳಿಸಿತು. ಈಗ ಕನ್ನಡದ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ಜೋಶ್ನಲ್ಲಿವೆ. ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ.. ಎಲ್ಲ ಭಾಷೆಗೂ ಹೋಗೋಕೆ ಕನ್ನಡ ಸಿನಿಮಾಗಳು ರೆಡಿಯಾಗುತ್ತಿವೆ. ಆದರೆ ಇದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಅಪಾಯವಿದೆ ಎಂಬ ವಾದ ಮುಂದಿಟ್ಟಿದ್ದಾರೆ ಹಿರಿಯ ನಟ ಜಗ್ಗೇಶ್.
ಚಿತ್ರರಂಗದಲ್ಲಿ 40 ವರ್ಷ ಪೂರೈಸಿರುವ ಜಗ್ಗೇಶ್ ಅನುಭವ ಸಣ್ಣದೇನಲ್ಲ. ನಟ, ನಿರ್ದೇಶಕ, ನಿರ್ಮಾಪಕ, ವಿತರಕ.. ಹೀಗೆ ಎಲ್ಲವೂ ಆಗಿರುವ ಜಗ್ಗೇಶ್ ವಾದ ಹೀಗಿದೆ. `ಪ್ಯಾನ್ ಇಂಡಿಯಾ ಹೆಸರಲ್ಲಿ ನಮ್ಮ ಚಿತ್ರಗಳು ಬೇರೆ ಭಾಷೆಗೆ ಹೋಗುವುದಷ್ಟೇ ಅಲ್ಲ, ಅಲ್ಲಿನ ಚಿತ್ರಗಳೂ ನಮ್ಮ ಭಾಷೆಗೆ ಬರುತ್ತವೆ. ಈ ಪೈಪೋಟಿ, ಸ್ಪರ್ಧೆಯಲ್ಲಿ ನಾವು ನಮ್ಮ ಸಂಸ್ಕøತಿಯನ್ನೇ ಕಳೆದುಕೊಂಡು ಬಿಡುತ್ತೇವೆ. ಯಾರಿಗೂ ಅವಕಾಶ ಸಿಕ್ಕಲ್ಲ. ನಾವೇ ಬೇಡುವ ಪರಿಸ್ಥಿತಿಗೆ ಬರುತ್ತೇವೆ'.
ಜಗ್ಗೇಶ್ ವಾದವನ್ನು ತಳ್ಳಿ ಹಾಕೋಕೆ ಆಗಲ್ಲ. ಉದಾಹರಣೆಗೆ ಹೇಳಬೇಕೆಂದರೆ ಇತ್ತೀಚೆಗೆ ತಮಿಳಿನ ಸೂರರೈ ಪೋಟ್ರು ಸಿನಿಮಾ ಒಟಿಟಿಯಲ್ಲಿ ಕನ್ನಡದಲ್ಲೂ ರಿಲೀಸ್ ಆಗಿತ್ತು. ಆ ಚಿತ್ರಕ್ಕೆ ಕನ್ನಡಿಗ ಕ್ಯಾ.ಗೋಪಿನಾಥ್ ಜೀವನವೇ ಸ್ಫೂರ್ತಿ. ಆದರೆ, ಆ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿದ್ದರೂ ತಮಿಳಿನ ಸೂರರೈಪೋಟ್ರು ಅನ್ನೋ ತಮಿಳು ಟೈಟಲ್ ಬದಲಿಸಿರಲಿಲ್ಲ. ಆದರೆ ತೆಲುಗಿನಲ್ಲಿ ತೆಲುಗಿನ ಟೈಟಲ್ನ್ನೇ ಇಡಲಾಗಿತ್ತು. ಕನ್ನಡಿಗನ ಸಾಧನೆಯನ್ನು ತಮಿಳು ಟೈಟಲ್ನ ಸಿನಿಮಾದಲ್ಲಿ ಕನ್ನಡದಲ್ಲಿಯೇ ನೋಡಿದ ಸಾಧನೆ ನಮ್ಮದು.