ಬಿಗ್ ಬಾಸ್ ಒಂದು ಸ್ಪೆಷಲ್ ರಿಯಾಲಿಟಿ ಶೋ. ಟಿವಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಬರೆದ ಈ ಶೋ ಈಗ ಮತ್ತೆ ಶುರುವಾಗುತ್ತಿದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಈ ವರ್ಷದ ಸೀಸನ್, ಇಷ್ಟೊತ್ತಿಗೆ ಶೋ ಶುರುವಾಗಿ ಮುಗಿದೂ ಹೋಗಿರಬೇಕಿತ್ತು. ಈಗ ಜನವರಿ 3ನೇ ವಾರದಿಂದ ಶುರುವಾಗುತ್ತಿದೆ ಬಿಗ್ ಬಾಸ್.
ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರದ್ದೇ ಸ್ಟೈಲಿಷ್ ನಿರೂಪಣೆ ಇರಲಿದೆ. ಸುದೀಪ್ ಸದ್ಯಕ್ಕೆ ಫಾರಿನ್ ಶೂಟಿಂಗ್ ಪ್ಲಾನ್ ಇಟ್ಟುಕೊಂಡಿಲ್ಲ. ಹೀಗಾಗಿ ಅವರು ವೀಕೆಂಡ್ನಲ್ಲಿ ನಮಗೆ ಸಿಗುತ್ತಾರೆ ಎಂದಿದ್ದಾರೆ ಕಲರ್ಸ್ ಕನ್ನಡ ವಾಹಿನಿಯ ಪರಮೇಶ್ವರ್ ಗುಂಡ್ಕಲ್.