ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತೆಲುಗು ಚಿತ್ರರಂಗಕ್ಕೆ ಲಗ್ಗೆ ಹಾಕಲು ಹೊರಟಿದ್ದಾರೆ. ಅಪ್ಪು ಅಭಿನಯದ ಯುವರತ್ನ ಸಿನಿಮಾ, ತೆಲುಗಿನಲ್ಲೂ ರಿಲೀಸ್ ಆಗಲಿದೆ. ಡಿಸೆಂಬರ್ 2ರಂದು ಯುವರತ್ನ ಚಿತ್ರದ ಸಾಂಗ್ ರಿಲೀಸ್ ಆಗಲಿದ್ದು, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಲಾಂಚ್ ಆಗುತ್ತಿದೆ. ಈ ಮೂಲಕ ಪುನೀತ್ ಮೊತ್ತ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಹಾಗಂತ ತೆಲುಗಿನವರಿಗೆ ಪುನೀತ್ ಗೊತ್ತೇ ಇಲ್ಲವೆಂದಲ್ಲ. ಪುನೀತ್ ನಟಿಸಿರುವ ಹಲವು ಚಿತ್ರಗಳು ತೆಲುಗಿಗೆ ಡಬ್ ಆಗಿವೆ. ಆದರೆ ಥಿಯೇಟರಲ್ಲಿ ರಿಲೀಸ್ ಆಗಿರಲಿಲ್ಲ.
ತೆಲುಗು ಚಿತ್ರರಂಗಕ್ಕೆ ಬರುತ್ತಿರೋ ಅಪ್ಪುಗೆ, ಅಪ್ಪು ಡೈರೆಕ್ಟರ್ ಪುರಿ ಜಗನ್ನಾಥ್ ಸ್ವಾಗತ ಕೋರಿದ್ದಾರೆ. ಡಾ.ರಾಜ್ ಕುಟುಂಬಕ್ಕೆ ತೆಲುಗು ಚಿತ್ರರಂಗ ಹೊಸದೇನಲ್ಲ. ಅಲ್ಲಿನ ಕಲಾವಿದರು ತಂತ್ರಜ್ಞರ ಜೊತೆಗಿನ ಬಾಂಧವ್ಯದ ಹೊರತಾಗಿಯೂ ಸಿನಿಮಾ ಮಾಡಿದ್ದಾರೆ. ಅಣ್ಣಾವ್ರ ಚಿತ್ರಗಳೂ ಕೂಡಾ ತೆಲುಗಿಗೆ ಡಬ್ ಆಗಿದ್ದವು. ಶಿವರಾಜ್ ಕುಮಾರ್, ಬಾಲಕೃಷ್ಣ ಮೇಲಿನ ಪ್ರೀತಿಗಾಗಿ ಅವರ ಚಿತ್ರದಲ್ಲಿ ಅತಿಥಿ ನಟರಾಗಿ ನಟಿಸಿದ್ದರು. ಜ್ಯೂ.ಎನ್ಟಿಆರ್, ಅಪ್ಪು ಚಿತ್ರಕ್ಕೆ ಹಾಡಿದ್ದರು. ಈಗ ಸ್ವತಃ ಅಪ್ಪು ತೆಲುಗು ಚಿತ್ರರಂಗಕ್ಕೆ ಹೊರಟಿದ್ದಾರೆ.
ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ 2021ರ ಬ್ಲಾಕ್ಬಸ್ಟರ್ ಆಗುವ ನಿರೀಕ್ಷೆ ಹುಟ್ಟಿಸಿದೆ.