ಹ್ಯಾಟ್ರಿಕ್ ಹೀರೋ.. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವತ್ತಿಗೂ ಇವತ್ತಿಗೂ ಬ್ಯುಸಿ ಹೀರೋ. ಸಿನಮಾ ಸೋಲಲಿ.. ಗೆಲ್ಲಲಿ.. ಶಿವಣ್ಣ ಕೈಲಿ ಸಿನಿಮಾಗಳಿದ್ದೇ ಇರುತ್ತವೆ. ಈ ಬಾರಿ ಸ್ವತಃ ಶಿವಣ್ಣ 2 ಸಿನಿಮಾಗಳನ್ನು ಡ್ರಾಪ್ ಮಾಡಿದ್ದಾರೆ.
ಸತ್ಯಜ್ಯೋತಿ ಬ್ಯಾನರ್ಸ್ನ ಎಸ್ಆರ್ಕೆ ಸಿನಿಮಾ ಹಾಗೂ ಆರ್ಡಿಎಕ್ಸ್ ಚಿತ್ರಗಳನ್ನು ಡ್ರಾಪ್ ಮಾಡಿದ್ದಾರೆ ಶಿವರಾಜ್ ಕುಮಾರ್. ಬೇರೆ ಬೇರೆ ಕಾರಣಗಳಿಗೆ ಈ ಎರಡೂ ಸಿನಿಮಾಗಳು ನಿಂತು ಹೋಗಿವೆ. ಹೆಚ್ಚಿನ ಮಾತು ಬೇಡ ಎನ್ನುತ್ತಾರೆ ಶಿವಣ್ಣ.
ಹೀಗಿದ್ದರೂ ಶಿವರಾಜ್ ಕುಮಾರ್ ಕೈಲೀಗ ಒಟ್ಟು 7 ಚಿತ್ರಗಳಿವೆ ಅನ್ನೋದೇ ಶಿವರಾಜ್ ಕುಮಾರ್ ತಾಕತ್ತು.