ರೆಬಲ್ ಸ್ಟಾರ್ ಅಂಬರೀಷ್ ಕನ್ನಡಿಗರ ಹೃದಯದಲ್ಲಿ ಸದಾ ಜೀವಂತವಾಗಿಯೇ ಇದ್ದಾರೆ. ಬದುಕಿದ್ದಾಗ ಅಂಬಿಯ ಬೈಗುಳಗಳನ್ನೇ ಪ್ರಸಾದದಂತೆ ಸ್ವೀಕರಿಸುತ್ತಿದ್ದ, ಅಂಬಿಯ ನಿಷ್ಕಲ್ಮಶ ಪ್ರೀತಿಯನ್ನು ಹೃದಯದಿಂದ ಆರಾಧಿಸುತ್ತಿದ್ದ ಅಭಿಮಾನಿಗಳಿಗೆ ಅಂಬಿಯೇ ದೇವರು. ಅಂತಹ ಅಭಿಮಾನಿಯೊಬ್ಬರು ಈಗ ಅಂಬರೀಷ್ ದೇವಸ್ಥಾನವನ್ನೂ ಕಟ್ಟಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ಹಟ್ಟಿಯಲ್ಲಿ ದೇವಸ್ಥಾನ ಕಟ್ಟಲಾಗಿದೆ. ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗಿರುವ ದೇವಸ್ಥಾನದಲ್ಲಿ ಅಂಬರೀಷ್ ಅವರ ಕಂಚಿನ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಪುತ್ಥಳಿ ಸ್ಥಳದಲ್ಲಿ ಅಂಬರೀಷ್ ಅವರ ಚಿತಾಭಸ್ಮವನ್ನು ಹಾಕಿ, ಪುತ್ಥಳಿ ಸ್ಥಾಪಿಸಲಾಗಿದೆ.
ಅಂಬರೀಷ್ ನಿಧನರಾದ ದಿನ ನವೆಂಬರ್ 24ರಂದು ಸುಮಲತಾ ಅಂಬರೀಷ್ ಈ ದೇವಸ್ಥಾನ ಉದ್ಘಾಟಿಸಲಿದ್ದಾರೆ.