ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ರಾಜಕುಮಾರಿ ಮತ್ತೆ ವಾಪಸ್ ಬಂದಿದ್ದಾರೆ. ಸೂಪರ್ ಹಿಟ್ ಚಿತ್ರ ರಾಜಕುಮಾರ ಚಿತ್ರದಲ್ಲಿ ನಂದಿನಿಯಾಗಿ ಮಿಂಚು ಹರಿಸಿದ್ದ ಪ್ರಿಯಾ ಆನಂದ್ ಜೇಮ್ಸ್ ಚಿತ್ರದಲ್ಲಿ ಮತ್ತೊಮ್ಮೆ ಪುನೀತ್ ಜೋಡಿಯಾಗುತ್ತಿದ್ದಾರೆ. ಭರ್ಜರಿ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕೆ ಜೊತೆಯಾಗುತ್ತಿದ್ದಾರೆ ಪ್ರಿಯಾ ಆನಂದ್.
ಈ ಮೂಲಕ ಜೇಮ್ಸ್ ಚಿತ್ರದ ತಾರಾಗಣಕ್ಕೆ ಇನ್ನಷ್ಟು ಸ್ಟಾರ್ಸ್ ಸೇರ್ಪಡೆಯಾದಂತಾಗಿದೆ. ಈಗಾಗಲೇ ತೆಲುಗು ಚಿತ್ರರಂಗದ ಸ್ಟಾರ್ ನಟ ಶ್ರೀಕಾಂತ್, ಆದಿತ್ಯ ಮೆನನ್ ಹಾಗೂ ಅನುಪ್ರಭಾಕರ್ ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರ ಜೊತೆಯಲ್ಲೇ ಪ್ರಿಯಾ ಆನಂದ್ ಸೇರ್ಪಡೆ ಜೇಮ್ಸ್ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಪುನೀತ್ ಜೊತೆ ಅನುಪ್ರಭಾಕರ್ ಅವರಿಗೆ ಇದು ಮೊದಲ ಸಿನಿಮಾ ಎನ್ನುವುದು ವಿಶೇಷ.