ಪಂಚತಂತ್ರ ಚಿತ್ರದ ಮೂಲಕ ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಡುವಂತೆ ಮಾಡಿದ್ದ ಸೋನಲ್ ಮಂಥೆರೋ, ಈಗ ಶಂಭೋ ಶಿವ ಶಂಕರ ಎಂಬ ಸಸ್ಪೆನ್ಸ್ ಚಿತ್ರಕ್ಕೆ ಸೈ ಎಂದಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ಮೂವರು ಹೀರೋಗಳಿದ್ದರೆ, ಒಬ್ಬರೇ ಹೀರೋಯಿನ್. ಅದು ಸೋನಲ್ ಮಂಥೆರೋ.
ಶಂಭು ಪಾತ್ರದಲ್ಲಿ ಅಭಯ್ ಪುನೀತ್, ಶಿವನಾಗಿ ರಕ್ಷಕ್ ಮತ್ತು ಶಂಕರನ ಪಾತ್ರದಲ್ಲಿ ರೋಹಿತ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕ ಅಭಯ್ ಗೆಳೆಯ ವರ್ತೂರು ಮಂಜು ನಿರ್ಮಾಪಕ. ಗೆಳೆಯನಿಗಾಗಿಯೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ ವರ್ತೂರು ಮಂಜು.
ಕಿರುತೆರೆಯ ಫೇಮಸ್ ಧಾರಾವಾಹಿ ಜೋಡಿಹಕ್ಕಿಯ ಡೈರೆಕ್ಟರ್ ಶಂಕರ್ ಕೋನಮಾನಹಳ್ಳಿ, ಈ ಚಿತ್ರಕ್ಕೆ ಡೈರೆಕ್ಟರ್.