ಜೊತೆ ಜೊತೆಯಲಿ, ಝೀ ಕನ್ನಡದಲ್ಲಿ ಪ್ರಸಾರಾವಾಗುತ್ತಿರೋ ಅತ್ಯಂತ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಅನಿರುದ್ಧರಷ್ಟೇ ಜನಪ್ರಿಯರಾಗಿರೋದು ನಾಯಕಿ ಅನು ಅಲಿಯಾಸ್ ಮೇಘಾ ಶೆಟ್ಟಿ. ಅವರಿಗೀಗ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಮೇಘಾ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರಕ್ಕೆ ನಾಯಕಿಯಾಗಿ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ನನ್ನದು ಹೋಮ್ಲಿ ಕ್ಯಾರೆಕ್ಟರ್. ಚಿತ್ರದ ಕಥೆಯನ್ನು ನಾನಿನ್ನೂ ಪೂರ್ತಿ ಕೇಳಿಲ್ಲ. ನನ್ನ ತಂಗಿ ಕಥೆ ಕೇಳಿ ಓಕೆ ಮಾಡಿದ್ಲು. ಅಕ್ಟೋಬರ್ 2ನೇ ವಾರದಿಂದ ಶೂಟಿಂಗ್ ಶುರು ಎಂದಿದ್ದಾರೆ ಮೇಘಾ ಶೆಟ್ಟಿ.
ಮಹೇಶ್ ಗೌಡ ಚಿತ್ರದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದರೂ, ಜೊತೆ ಜೊತೆಯಲಿ ಧಾರಾವಾಹಿ ಬಿಡಲ್ಲ ಎಂದಿದ್ದಾರೆ ಮೇಘಾ.