` ಮೊತ್ತ ಮೊದಲ ಬಾರಿಗೆ ಕೊಟ್ಟ ಮಾತು ತಪ್ಪಿದ ಎಸ್‍ಪಿಬಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
SPB Broke Promise For The First Time
SP Balasubramanyam

ಎಸ್‍ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ. ವೃತ್ತಿಜೀವನದಲ್ಲಿ ಅದು ವೈಯಕ್ತಿಕವೇ ಆಗಲಿ, ವೃತ್ತಿಪರವೇ ಆಗಿರಲಿ.. ಎಸ್‍ಪಿಬಿ ಎಂದಿಗೂ ಕೊಟ್ಟ ಮಾತು ತಪ್ಪಿದವರಲ್ಲ. ಆದರೆ ಇದೇ ಮೊದಲ ಬಾರಿ ಎಸ್‍ಪಿಬಿ ಕೊಟ್ಟ ಮಾತು ತಪ್ಪಿ ನಡೆದಿದ್ದಾರೆ.

ಆಗಸ್ಟ್ 5ರಂದು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದ ಬಾಲಸುಬ್ರಹ್ಮಣ್ಯಂ ಆ ದಿನ ತಾವು ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ. ಕೊರೊನಾ ಭಯಪಡುವ ಕಾಯಿಲೆಯೇನೂ ಅಲ್ಲ ಎಂದಿದ್ದರು. ಅಫ್‍ಕೋರ್ಸ್, ಕೊರೊನಾವನ್ನೇನೋ ಎಸ್‍ಪಿಬಿ ಸೋಲಿಸಿಬಿಟ್ಟರು. ಆದರೆ.. ಶ್ವಾಸಕೋಶದ ತೊಂದರೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಎಸ್‍ಪಿಬಿ ಅವರಿಗೆ ಇಸಿಎಂಒ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಚಿಕಿತ್ಸೆಯಲ್ಲಿ ಎಸ್‍ಪಿಬಿ ಅವರ ಮೂಳೆಗಳಿಂದ ಮಜ್ಜೆಯನ್ನು ತೆಗೆದು ಚಿಕಿತ್ಸೆ ನೀಡಬೇಕಿತ್ತು. ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು. ಅಕಸ್ಮಾತ್ ಆ ವೇಳೆ ಮಜ್ಜೆಯ ಬದಲು ರಕ್ತ ಬಂದರೆ ಉಳಿಸೋಕೆ ಸಾಧ್ಯವಿಲ್ಲ ಎಂದಿದ್ದರು. ಕುಟುಂಬಸ್ಥರ ಬಳಿಯೂ ಅನ್ಯ ಮಾರ್ಗ ಇರಲಿಲ್ಲ. ಹೀಗಾಗಿ ಆ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.

ಕೋಟ್ಯಂತರ ಹೃದಯಗಳ ಪ್ರಾರ್ಥನೆ ಫಲಿಸಲಿಲ್ಲ. ಚಿಕಿತ್ಸೆಯಲ್ಲಿ ಮೂಳೆಯೊಳಗೆ ಮಜ್ಜೆಯನ್ನು ತೆಗೆಯಲು ಪ್ರಯತ್ನಿಸಿದಾಗ ಮಜ್ಜೆ ಬರಲಿಲ್ಲ. ಬಂದಿದ್ದು ರಕ್ತ. ಹೀಗಾಗಿ ಎಸ್‍ಪಿಬಿ ಅವರನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವೂ ವಿಫಲವಾಗಿ ಹೋಯ್ತು.

ವಾಪಸ್ ಬರುತ್ತೇನೆ. ಅಭಿಮಾನಿಗಳೇ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದ ಎಸ್‍ಪಿಬಿ, ವಾಪಸ್ ಬರಲೇ ಇಲ್ಲ. ಅಷ್ಟೇ ಅಲ್ಲ, ಸರಿರಾತ್ರಿಯಾದರೂ ಸರಿ, ಇಳಯರಾಜ ಕರೆದರೆ ಓಡೋಡಿ ಹೋಗುತ್ತಿದ್ದ ಎಸ್‍ಪಿಬಿ, ಇದೇ ಮೊದಲ ಬಾರಿಗೆ ಇಳಯರಾಜ ಕರೆದಾಗಲೂ ಎದ್ದೇಳಲಿಲ್ಲ. ಎಸ್‍ಪಿಬಿ ಮೊತ್ತ ಮೊದಲ ಬಾರಿಗೆ ಕೊಟ್ಟ ಮಾತು ತಪ್ಪಿಬಿಟ್ಟರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery