ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ, ಪ್ಯಾರ್ ಗೇ ಹುಡುಗಿ ಪಾರುಲ್ ಯಾದವ್ ಡ್ರಗ್ಸ್ ಕೇಸ್ ಹೋಗುತ್ತಿರುವ ಹಾದಿಯ ಬಗ್ಗೆ ಸಿಟ್ಟಿಗೆದ್ದಿದ್ದಾರೆ. ಡ್ರಗ್ಸ್ ಕೊನೆಗಾಣಬೇಕು ನಿಜ, ಆದರೆ ಈಗ ಅದು ಹೋಗುತ್ತಿರುವ ರೀತಿ ಸರಿಯಿಲ್ಲ ಅನ್ನೋದು ಪಾರುಲ್ ಯಾದವ್ ಆಕ್ಷೇಪ. ಅವರ ಆಕ್ಷೇಪಕ್ಕೆ ಕಾರಣಗಳೂ ಇವೆ.
ಇದುವರೆಗೆ ಡ್ರಗ್ಸ್ ಕೇಸ್‍ನಲ್ಲಿ ಅರೆಸ್ಟ್ ಆಗಿರುವುದು ಕೇವಲ ನಟಿಯರು. ರಾಗಿಣಿ, ಸಂಜನಾ ಸೇರಿದಂತೆ ಇದುವರೆಗೆ ನಟಿಯರಷ್ಟೇ ಅರೆಸ್ಟ್ ಆಗಿದ್ದಾರೆ. ಪುರುಷ ಕಲಾವಿದರನ್ನು ಕರೆದು ವಿಚಾರಣೆ ಮಾಡಿ ಕಳಿಸಿಕೊಡಲಾಗಿದೆ. ಹಾಗಾದರೆ ಪುರುಷರು ಡ್ರಗ್ಸ್ ತೆಗೆದುಕೊಳ್ಳೋದಿಲ್ವಾ..? ಈ ತಾರತಮ್ಯ ಯಾಕೆ..? ನಟಿಯರು ಸಾಫ್ಟ್ ಟಾರ್ಗೆಟ್ ಅಂತಾನಾ..? ಎಂದು ಪ್ರಶ್ನಿಸಿದ್ದಾರೆ ಪಾರುಲ್ ಯಾದವ್.
ಅತ್ತ ನಟಿ ಹಾಗೂ ಮಂಡ್ಯದ ಮಾಜಿ ಸಂಸದೆಯೂ ಆಗಿರುವ ರಮ್ಯಾ ಗಂಡಸರು ಸೇದಿದರೆ ಶಂಭೋ ಶಿವ ಶಂಭೋ... ಹೆಣ್ಮಕ್ಕಳು ಸೇದಿದರೆ ಧಮ್ ಮಾರೋ ಧಮ್ ಎಂದು ಟ್ವೀಟ್ ಮಾಡೋ ಮೂಲಕ ಮಾರ್ಮಿಕವಾಗಿಯೇ ತನಿಖೆಯ ಹಾದಿಯನ್ನು ಪ್ರಶ್ನಿಸಿದ್ದಾರೆ.