` ಲೂಸ್ ಮಾದ ಯೋಗಿ.. ಅಯ್ಯಪ್ಪ.. ಬ್ರಹ್ಮಗಂಟು ನಟಿ.. ಯಾರಿಗೆಲ್ಲ  ತಗ್ಲಾಕ್ಕೊಳ್ತು ಡ್ರಗ್ಸ್ ಕೇಸ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Loose Mada Yogi, Ayyappa Gets Summons From CCB
Loose Mada Yogi

ನಟಿಯರಾದ ರಾಗಿಣಿ, ಸಂಜನಾ ನಂತರವೂ ಸ್ಯಾಂಡಲ್‍ವುಡ್‍ನಲ್ಲಿ ಇನ್ನಷ್ಟು ಜನ ಡ್ರಗ್ಸ್ ಕೇಸ್‍ನಲ್ಲಿ ಸಿಲುಕಿಕೊಳ್ತಾರೆ ಅನ್ನೋ ನಿರೀಕ್ಷೆ ನಿಜವಾಗಿದೆ. ಈಗ ಡ್ರಗ್ಸ್ ಕೇಸ್‍ನಲ್ಲಿ ಹೊಸ ಹೊಸ ಹೆಸರುಗಳು ಹೊರಬರುತ್ತಿವೆ.

ಈಗ ಬಂದಿರೋ ಹೊಸ ಹೆಸರುಗಳಲ್ಲಿ ಲೂಸ್ ಮಾದ ಯೋಗಿಯ ಹೆಸರಿದೆ. ಬೆಂಗಳೂರು, ಮಡಿಕೇರಿ ಸೇರಿದಂತೆ ಹಲವೆಡೆ ಯೋಗಿ ಡ್ರಗ್ಸ್ ಪಾರ್ಟಿ ಮಾಡಿದ್ದಾರೆ ಅನ್ನೋದು ಆರೋಪ. ಆದರೆ ಇದನ್ನು ಯೋಗಿ ಅಲ್ಲಗಳೆದಿದ್ದಾರೆ.

ಮತ್ತೊಂದು ಹೆಸರು ಎನ್.ಸಿ.ಅಯ್ಯಪ್ಪ ಅವರದ್ದು. ಅಯ್ಯಪ್ಪ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರಾಗಿದ್ದವರು. ನಟಿ ಪ್ರೇಮಾ ಅವರ ಸಹೋದರ. ಅಯ್ಯಪ್ಪ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. 2 ದಿನಗಳ ಹಿಂದೆಯೇ ವಿಚಾರಣೆ ನಡೆದಿದೆ. ಟ್ರಾವೆಲ್ ಹಿಸ್ಟರಿ ಕೊಟ್ಟಿದ್ದೇನೆ. ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ. ಮತ್ತೆ ವಿಚಾರಣೆಗೆ ಕರೆಸುತ್ತೇವೆ ಎಂದು ಅಧಿಕಾರಿಗಳೂ ಹೇಳಿಲ್ಲ ಅನ್ನೋದು ಅಯ್ಯಪ್ಪ ಮಾತು.

ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಟ್, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿಷೇಕ್, ರಶ್ಮಿತಾ ಚೆಂಗಪ್ಪ, ಸುದ್ದಿ ವಾಹಿನಿಯೊಂದರ ಮಾಜಿ ಉದ್ಯೋಗಿ ನಿಶ್ಚಿತಾ ಸೇರಿದಂತೆ ಹೊಸದಾಗಿ 12 ಹೆಸರುಗಳು ವಿಚಾರಣೆಗೆ ಸೇರ್ಪಡೆಯಾಗಿವೆ.

ನೋಟಿಸ್ ಬಂದಿದೆ ಅನ್ನೋದನ್ನು ಗೀತಾ ಭಟ್ ಖಚಿತಪಡಿಸಿದ್ದಾರೆ. ಯಾರದೋ ಮೊಬೈಲ್‍ನಲ್ಲಿ ನನ್ನ ನಂಬರ್ ಪತ್ತೆಯಾಗಿದೆ. ಹೀಗಾಗಿ ಕರೆದಿದ್ದಾರೆ. ಅಲ್ಲಿಯೇ ಎಲ್ಲವನ್ನೂ ವಿವರಿಸುತ್ತೇನೆ ಎಂದಿದ್ದಾರೆ ಬ್ರಹ್ಮಗಂಟು ಗೀತಾ ಭಟ್.

ಅಂದಹಾಗೆ ಇವರೆಲ್ಲರೂ ಸದ್ಯಕ್ಕೆ ಆರೋಪಿಗಳೇ ಹೊರತು, ಅಪರಾಧಿಗಳಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery