ಡಿಂಪಲ್ ಕ್ವೀನ್ ರಚಿತಾ ರಾಮ್ ಕಸ್ತೂರಿ ಮಹಲ್ ಚಿತ್ರದಿಂದ ದಿಢೀರನೆ ಹೊರನಡೆದಿದ್ದಾರೆ. ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರವಿದು. ಆರಂಭದಲ್ಲಿ ಕಸ್ತೂರಿ ನಿವಾಸ ಎಂದು ಟೈಟಲ್ ಇಟ್ಟುಕೊಂಡಿದ್ದ ಚಿತ್ರತಂಡ, ರಾಜ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಟೈಟಲ್‍ನ್ನು ಬದಲಿಸಿತ್ತು. ಈಗ ನಾಯಕಿಯನ್ನೇ ಬದಲಾಯಿಸಬೇಕಾಗಿದೆ.
ಜಸ್ಟ್ ಒಂದು ಮೆಸೇಜ್ ಮಾಡಿ ಚಿತ್ರತಂಡದಿಂದ ಹೊರ ಹೋಗಿದ್ದಾರಂತೆ ರಚಿತಾ ರಾಮ್. ಅವರು ಸ್ಪಷ್ಟ ಕಾರಣಗಳನ್ನೇ ಕೊಟ್ಟಿಲ್ಲ ಎನ್ನುತ್ತಿದೆ ಚಿತ್ರತಂಡ. ಮೂಲಗಳ ಪ್ರಕಾರ ತಮ್ಮ ಕ್ಯಾರೆಕ್ಟರ್‍ನಲ್ಲಿ ಬದಲಾವಣೆಗೆ ರಚಿತಾ ರಾಮ್ ಕೇಳಿಕೊಂಡಿದ್ದರು. ಆದರೆ ಸ್ಕ್ರಿಪ್ಟ್ ಬದಲಾವಣೆಗೆ ದಿನೇಶ್ ಬಾಬು ಒಪ್ಪಲಿಲ್ಲ. ಹೀಗಾಗಿ ರಚಿತಾ ರಾಮ್ ಚಿತ್ರವನ್ನೇ ಕೈಬಿಟ್ಟರು ಎನ್ನಲಾಗುತ್ತಿದ.
ನಾನು ಸ್ಕ್ರಿಪ್ಟ್‍ನ್ನೇ ನಂಬಿಕೊಂಡಿರುವವನು. ನನ್ನ ನಂಬಿಕೆ, ಗೌರವ ಎರಡೂ ನನ್ನ ಸ್ಕ್ರಿಪ್ಟ್. ಹೀಗಾಗಿ ಚಿತ್ರದ ಹೀರೋ, ಹೀರೋಯಿನ್‍ಗಾಗಿ ಬದಲಾವಣೆ ಮಾಡಿಕೊಳ್ಳಲಾರೆ ಎಂದಿದ್ದಾರೆ ದಿನೇಶ್ ಬಾಬು. ರಚಿತಾ ರಾಮ್ ಹೊರನಡೆದಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 5ರಿಂದ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಈಗ ಚಿತ್ರತಂಡ ಹೊಸ ನಾಯಕಿಯ ಹುಡುಕಾಟದಲ್ಲಿದೆ. ರಚಿತಾ ರಾಮ್ ಬಿಟ್ಟು ಹೋದ ಪಾತ್ರವನ್ನು ಯಾರು ಒಪ್ಪಿಕೊಳ್ತಾರೆ..?