` ರವಿಚಂದ್ರನ್-ಉಪ್ಪಿ ಕಾಂಬಿನೇಷನ್ ಚಿತ್ರದ ಟೈಟಲ್ ಮತ್ತೆ ಬದಲು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Ravichandran- Upendra Movie Title Changed
Ravichandran, Upendra

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ. ಇವರಿಬ್ಬರೂ ಒಟ್ಟಿಗೇ ನಟಿಸುತ್ತಿರುವ ಮೊತ್ತ ಮೊದಲ ಚಿತ್ರದ ಟೈಟಲ್ ಸತತ 3ನೇ ಬಾರಿಗೆ ಬದಲಾಗಿದೆ.

ಆರಂಭದಲ್ಲಿ ಈ ಚಿತ್ರಕ್ಕೆ ರವಿಚಂದ್ರ ಎಂದು ಟೈಟಲ್ ಕೊಡಲಾಗಿತ್ತು. ನಂತರ ವೇದವ್ಯಾಸ ಎಂದು ಟೈಟಲ್ ಬದಲಾವಣೆ ಮಾಡಲಾಯ್ತು. ಈಗ ಅದೇ ಚಿತ್ರಕ್ಕೆ ತ್ರಿಶೂಲಂ ಎಂದು ಟೈಟಲ್ ಇಡಲಾಗಿದೆ. ಉಪ್ಪಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಟೈಟಲ್ ಇರುವ ಪೋಸ್ಟರ್ ಕೂಡಾ ರಿಲೀಸ್ ಆಗಿದೆ.

ಇದು ತೆಲುಗಿನ ಬಲುಪು ಚಿತ್ರದ ರೀಮೇಕ್. ರವಿತೇಜ, ಪ್ರಕಾಶ್ ರೈ ನಟಿಸಿದ್ದ ಆ ಚಿತ್ರವನ್ನು ಕನ್ನಡದಲ್ಲಿ ಮಾಡಲಾಗುತ್ತಿದೆ. ರವಿತೇಜ ರೋಲ್‍ನಲ್ಲಿ ಉಪ್ಪಿ, ರೈ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್ ನಾಯಕಿ. ನಿಮಿಕಾ ರತ್ನಾಕರ್ ಇನ್ನೋರ್ವ ನಾಯಕಿ. ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರಕ್ಕೆ ಆರ್. ಶ್ರೀನಿವಾಸ್ ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery