` ರಶ್ಮಿಕಾ ಮಂದಣ್ಣ ಇನ್ಮುಂದೆ C/o ಕೊಡಗು ಅಲ್ಲ.. C/o... - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
Rashmika Tp Spend More Time In Hyderabad
Rashmika Mandanna

ರಶ್ಮಿಕಾ ಮಂದಣ್ಣ, ಮಿಂಚುತ್ತಿರುವುದು ತೆಲುಗಿನಲ್ಲಿಯೇ ಆದರೂ, ಅಪ್ಪಟ ಕನ್ನಡತಿ. ಅದರಲ್ಲೂ ಕೊಡವ ಪೊಣ್ಣು. ಕೇರ್ ಆಫ್ ಅಡ್ರೆಸ್ ಇರೋದು ಕೊಡಗಿನಲ್ಲೇ. ಕೊಡಗಿನಲ್ಲಿ ಎಸ್ಟೇಟ್, ಮನೆ ಎಲ್ಲವೂ ಇರೋ ರಶ್ಮಿಕಾ ತಮ್ಮ ಅಡ್ರೆಸ್ಸನ್ನೂ ಚೇಂಜ್ ಮಾಡ್ತಿದ್ದಾರಾ..? ಹೌದಂತೆ.

ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಹೈದರಾಬಾದ್‍ನಲ್ಲಿ ಒಂದು ಮನೆ ಖರೀದಿಸಿದ್ದಾರೆ. ಕನ್ನಡಕ್ಕಿಂತಲೂ ತೆಲುಗಿನಲ್ಲಿಯೇ ಹೆಚ್ಚು ಮಿಂಚುತ್ತಿರೋದು ಹಾಗೂ ಸಂಭಾವನೆ ಕನ್ನಡಕ್ಕಿಂತ ಹೆಚ್ಚಿರೋದು ಇದಕ್ಕೆ ಕಾರಣ. ಇಲ್ಲಿಂದ ಅಲ್ಲಿಗೆ ಓಡಾಡುವ ಬದಲು ಅಲ್ಲಿಯೇ ಒಂದು ಮನೆ ಖರೀದಿಸಿದ್ರೆ ಒಳ್ಳೆಯದಲ್ಲವೇ ಎನಿಸಿದ್ದರೆ ಅಚ್ಚರಿ ಇಲ್ಲ.

ಹೈದರಾಬಾದ್‍ನಲ್ಲಿ ಗಚ್ಚಿಬೊಲಿಯಲ್ಲಿ 4 ಬೆಡ್‍ರೂಂ ಇರುವ ಮನೆಯನ್ನೇ ಖರೀದಿಸಿರುವ ರಶ್ಮಿಕಾ ಮಂದಣ್ಣ, ಇನ್ನು ಮುಂದೆ ಅಲ್ಲಿಯೇ ಹೆಚ್ಚು ಕಾಲ ನೆಲೆಸಲಿದ್ದಾರೆ. ಇದು ಶಂಶಾಬಾದ್ ಏರ್‍ಪೋರ್ಟ್‍ಗೂ ಹತ್ತಿರ. ಅಷ್ಟೇ ಅಲ್ಲ, ಇದು ಬರೋದು ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ. ಹೀಗಾಗಿ ಎಲ್ಲದಕ್ಕೂ ಅನೂಕೂಲವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery