ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಸೆನ್ಸೇಷನ್ ಅಪ್‍ಡೇಟ್ ಇದು. ಯುವರತ್ನ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದಿಷ್ಟು ಹಾಡುಗಳ ಶೂಟಿಂಗ್ ಬ್ಯಾಲೆನ್ಸ್ ಇದೆ. ಈಗ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್‍ಗೆ ಮುಹೂರ್ತ ಫಿಕ್ಸ್ ಆಗಿದೆ.
ಸೆ.20ರಿಂದ ಸಾಂಗ್ ಶೂಟಿಂಗ್ ಶುರುವಾಗಲಿದ್ದು, ಡ್ಯಾನ್ಸ್ ಅಪ್ಪು ಡ್ಯಾನ್ಸ್ ಖ್ಯಾತಿಯ ಜಾನಿ ಮಾಸ್ಟರ್ ಅವರದ್ದೇ ಕೊರಿಯೋಗ್ರಫಿ ಎಂದು ಮಾಹಿತಿ ಕೊಟ್ಟಿದ್ದಾರೆ ಡೈರೆಕ್ಟರ್ ಸಂತೋಷ್ ಆನಂದರಾಮ್. ಪುನೀತ್, ಹೊಂಬಾಳೆ ಕಂಬೈನ್ಸ್ ಮತ್ತು ವಿಜಯ್ ಕಿರಗಂದೂರು ಜೊತೆ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‍ನ ಚಿತ್ರವಿದು. ಮಲ್ಟಿಸ್ಟಾರ್ ಚಿತ್ರವಾಗಿರೋ ಯುವರತ್ನ, 2021ರ ಆರಂಭದಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.