ಆ್ಯಕ್ಷನ್ ಚಿತ್ರಗಳ ಮೂಲಕವೇ ಬೆಳ್ಳಿತೆರೆಗೆ ಪರಿಚಿತವಾದ ಸುಮಂತ್ ಶೈಲೇಂದ್ರ ಈಗ ನಕ್ಕು ನಗಿಸೋಕೆ ರೆಡಿಯಾಗಿದ್ದಾರೆ. ಜಾಕಿ ಭಾವನಾ ಜೊತೆ ಗೋವಿಂದಾ ಗೋವಿಂದಾ ಅನ್ನೋ ಚಿತ್ರದಲ್ಲಿ ನಟಿಸಿದ್ದು, ಅದು ಕಂಪ್ಲೀಟ್ ಕಾಮಿಡಿ ಚಿತ್ರವಂತೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಗೋವಿಂದಾ ಗೋವಿಂದಾ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಯು ಪ್ರಮಾಣ ಪತ್ರವನ್ನೂ ಪಡೆದಿದೆ.
ಶೈಲೇಂದ್ರ ಬಾಬು ಮತ್ತು ರವಿ ಆರ್.ಗರಣಿ ನಿರ್ಮಾಣದ ಚಿತ್ರಕ್ಕೆ ತಿಲಕ್ ಡೈರೆಕ್ಟರ್. ಕನ್ನಡದಲ್ಲಿ ರೆಡಿಯಾಗಿರುವ ಚಿತ್ರವನ್ನು ತಮಿಳು ಹಾಗೂ ಮಲಯಾಳಂಗೆ ಡಬ್ ಮಾಡಲಾಗುತ್ತಿದೆ. ಮೂರೂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎನ್ನುತ್ತಾರೆ ನಿರ್ಮಾಪಕ ಶೈಲೇಂದ್ರ ಬಾಬು.