` ಕಿಚ್ಚನ ಶಾಂತಿ ನಿವಾಸ : ಇದು ರೀಲ್ ಅಲ್ಲ ರಿಯಲ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep to make his cine dream come true
Sudeep Image

ಶಾಂತಿ ನಿವಾಸ ಸಿನಿಮಾ ನೆನಪಿದೆಯಾ..? ಕಿಚ್ಚ ಸುದೀಪ್ ಅವರೇ ನಟಿಸಿ ನಿರ್ದೇಶಿಸಿದ್ದ ಚಿತ್ರವದು. ಒಂದು ಅತ್ಯುತ್ತಮ ಸಂದೇಶದೊಂದಿಗೆ ನಿರ್ಮಿಸಿದ್ದ ಚಿತ್ರ ಪ್ರೇಕ್ಷಕರಿಗೆ ಅದೇಕೋ ಇಷ್ಟವಾಗಲಿಲ್ಲ. ಆದರದು ಕಿಚ್ಚನ ಕನಸಾಗಿತ್ತು. ಈಗ ಆ ಸಿನಿಮಾದ ಆಶಯವನ್ನು ಸ್ವತಃ ತಾವೇ ಈಡೇರಿಸಲು ಹೊರಟಿದ್ದಾರೆ ಕಿಚ್ಚ ಸುದೀಪ. ಶಾಂತಿ ನಿವಾಸ ಹೆಸರಿನ ವೃದ್ಧಾಶ್ರಮವೊಂದು ಕಿಚ್ಚನ ಹುಟ್ಟುಹಬ್ಬದ ದಿನ ತಲೆಯೆತ್ತಲಿದೆ.

you_tube_chitraloka1.gif

ಸೆಪ್ಟೆಂಬರ್ 2ರಂದು ಶಾಂತಿ ನಿವಾಸ ಎಂಬ ವೃದ್ಧಾಶ್ರಮಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಆ ವೃದ್ಧಾಶ್ರಮದ ಉದ್ದೇಶ, ಥೇಟು ಶಾಂತಿ ನಿವಾಸ ಸಿನಿಮಾದ್ದೇ. ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳವಾಡಿಕೊಂಡೋ, ಬೇಸರದಿಂದಲೋ ಮನೆ ಬಿಟ್ಟು ಬರುವ ಹಿರಿಯರಿಗೆ, ಅಸಹಾಯಕರಿಗೆ ಅದು ಆಶ್ರಯತಾಣ. ಊಟ, ವಸತಿ, ಮೆಡಿಕಲ್ ಸೌಲಭ್ಯ ಎಲ್ಲವೂ ಉಚಿತ. ಖರ್ಚೆಲ್ಲವೂ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ನದ್ದು.

ಹಾಗಂತ ಎಲ್ಲರನ್ನೂ ಅಲ್ಲಿಯೇ ಇಟ್ಟುಕೊಳ್ಳುವುದೂ ಇಲ್ಲ. ಹಾಗೆ ಬಂದವರಿಗೆ ಆಶ್ರಯ ನೀಡಿ, ನಂತರ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆಯೂ ಇರಲಿದೆ. ಕೌನ್ಸೆಲಿಂಗ್ ಮೂಲಕ ಮನೆಯವರನ್ನು ಮನವೊಲಿಸುವ ಕಾಯಕವೂ ನಡೆಯಲಿದೆ. ಅಗತ್ಯ ಬಿದ್ದರೆ ಆ ಕೌನ್ಸೆಲಿಂಗ್‍ನ್ನು ಸ್ವತಃ ಸುದೀಪ್ ಕೂಡಾ ಮಾಡುತ್ತಾರೆ. ಇಡೀ ಆಶ್ರಮದ ಕಲ್ಪನೆ, ಪ್ಲಾನಿಂಗ್, ಹಣಕಾಸು ವೆಚ್ಚ ಎಲ್ಲವೂ ಸುದೀಪ್ ಅವರದ್ದೇ ಎಂದಿದ್ದಾರೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ರಮೇಶ್ ಕಿಟ್ಟಿ.

ಮಾಗಡಿ ರಸ್ತೆಯ ಎಲೆಕೊಡಿಗೆ ಹಳ್ಳಿಯಲ್ಲಿ ಈ ಶಾಂತಿ ನಿವಾಸ ತಲೆಯೆತ್ತಲಿದೆ. ಸೆ.2ರಂದು ಸುದೀಪ್ ಹೈದರಾಬಾದ್‍ನಲ್ಲಿರುತ್ತಾರೆ. ಹೀಗಾಗಿ ಅವರ ಕುಟುಂಬದವರು ಶಂಕುಸ್ಥಾಪನೆ ನೆರವೇರಿಸುತ್ತಾರೆ. ಕಿಚ್ಚನ 47ನೇ ಹುಟ್ಟುಹಬ್ಬದ ನೆನಪಿಗಾಗಿ ಆ ದಿನ 47 ಅನಾಥಾಶ್ರಮಗಳಿಗೆ ಒಂದು ತಿಂಗಳ ದಿನಸಿ ವಿತರಣೆಯನ್ನೂ ಹಮ್ಮಿಕೊಳ್ಳಲಾಗಿದೆ.

ಇಂತಹ ಆಶಯಗಳು, ಕನಸುಗಳನ್ನು ಈಡೇರಿಸುತ್ತಾ.. ನೂರ್ಕಾಲ ಬಾಳಿ ಸುದೀಪ್.