` ಕೆಜಿಎಫ್ 2ಗೆ ಇನ್ನೊಬ್ಬ ಹೀರೋ ಎಂಟ್ರಿ..! - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
rj rohith joins kgf chapter 2 team
RJ Rohith

ಇತ್ತೀಚೆಗಷ್ಟೇ ಕೆಜಿಎಫ್ ಚಾಪ್ಟರ್ 2ಗೆ ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾರೆ. ಅದು ವಿವಾದವನ್ನೇ ಸೃಷ್ಟಿಸಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನೇ ಬಹಿಷ್ಕರಿಸಿ ಎಂದು ಒಂದು ಕಡೆಯವರು ಅಭಿಯಾನ ಮಾಡುತ್ತಿದ್ದರೆ, ಸಿನಿಮಾವನ್ನು ಸಿನಿಮಾ ಆಗಿ ನೋಡಿ ಎಂದು ಇನ್ನೊಂದು ಕಡೆಯವರು ಬುದ್ದಿವಾದ ಹೇಳುತ್ತಿದ್ದಾರೆ. ಇದೆಲ್ಲದರ ನಡುವೆಯೇ ಕೆಜಿಎಫ್ ಚಾಪ್ಟರ್ 2ಗೆ ಇನ್ನೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ.

ಹೀಗೆ ಎಂಟ್ರಿ ಕೊಟ್ಟಿರುವ ನಟ ಆರ್‍ಜೆ ರೋಹಿತ್. ಅದೂ ಕೂಡಾ ಕೆಜಿಎಫ್ 2 ನವರು ರಿಲೀಸ್ ಮಾಡಿರೋ ಫೋಟೋಗಳಲ್ಲಿ ದಿಢೀರನೆ ಕಂಡ ಮುಖ ಅದು. ಅದನ್ನು ಟೀಂ ಗುಟ್ಟಾಗಿಯೇ ಇಟ್ಟಿತ್ತು. ಈಗಲೂ ಕೂಡಾ ರೋಹಿತ್ ಅವರ ಪಾತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅಥವಾ ಕೆಜಿಎಫ್ 2 ಟೀಂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.