` ಆ್ಯಕ್ಷನ್ ಹೀರೋ ಆಗಿ ಎಂಟ್ರಿ ಕೊಟ್ಟ ತ್ರಿವಿಕ್ರಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vikram's mass look in trivikrama
Trivikrama Movie Image

ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಪುತ್ರ ವಿಕ್ರಮ್, ಆ್ಯಕ್ಷನ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಮ್ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ್ ಚಿತ್ರದ ಟೀಸರ್ ಹೊರಬಂದಿದ್ದು, ಸಾಹಸ ದೃಶ್ಯಗಳಲ್ಲಿ ಗಮನ ಸೆಳೆದಿದ್ದಾರೆ ವಿಕ್ರಮ್.

ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ್ ಚಿತ್ರಕ್ಕೆ ರಾಮ್ಗೋ ಸೋಮಣ್ಣ ನಿರ್ಮಾಪಕರು. ವಿಕ್ರಮ್ ಬರ್ತ್ ಡೇ ವಿಶೇಷವಾಗಿ ಟೀಸರ್ ಬಿಟ್ಟಿರೋ ಕಾರಣದಿಂದ, ಬೇರೆ ಕಲಾವಿದರನ್ನು ಹೈಲೈಟ್ ಮಾಡಿಲ್ಲ. ಚಿತ್ರದ ಶೇ.95ರಷ್ಟು ಚಿತ್ರೀಕರಣ ಮುಗಿದಿದ್ದು, 2021ರ ಸಂಕ್ರಾಂತಿ ಅಥವಾ ಪ್ರೇಮಿಗಳ ದಿನಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದೆಯಂತೆ ಚಿತ್ರತಂಡ.

ವಿಕ್ರಮ್ ಎದುರು ಆಕಾಂಕ್ಷಾ ಶರ್ಮಾ ಚಿತ್ರದ ನಾಯಕಿಯಾಗಿದ್ದಾರೆ. ಅಕ್ಷರಾ ಗೌಡ, ತುಳಸಿ ಶಿವಮಣಿ, ಚಿಕ್ಕಣ್ಣ, ಸಾಧುಕೋಕಿಲ ಮೊದಲಾದವರು ನಟಿಸಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯಾ.