ಸ್ಯಾಂಡಲ್‍ವುಡ್‍ಗೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಸಂಜಯ್ ದತ್, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಬ್ರೇಕ್ ತೆಗೆದುಕೊಂಡಿರುವ ಕೆಜಿಎಫ್ ಟೀಂಗೆ ಈಗ ಎಲ್ಲರೂ ಕೇಳ್ತಿರೋ ಪ್ರಶ್ನೆ.. ಸಂಜಯ್ ದತ್ ಪಾತ್ರದ ಶೂಟಿಂಗ್ ಮುಗಿದಿದೆಯಾ ಅನ್ನೋದು.
ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಎಂದು ಗೊತ್ತಾಗಿದ್ದೇ ತಡ, ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡ, ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಒಂದೆರಡು ಸೀನ್ ಬಾಕಿಯಿದೆ. ಸಂಜಯ್ ದತ್ ಬೇಗ ಗುಣಮುಖರಾಗಲಿದ್ದು, ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡಲಿದ್ದಾರೆ ಎಂದೂ ಹೇಳಿದೆ.
ಸಂಜಯ್ ದತ್ ಬೇಗ ಗುಣಮುಖರಾಗಲಿ.