` ದರ್ಶನ್ ಡಬಲ್ ಆ್ಯಕ್ಟಿಂಗ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
darshan milana prakash image
darshan, milana prakash

ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಬಲ್ ಆ್ಯಕ್ಟಿಂಗ್ ಮಾಡೋಕೆ ಮತ್ತೊಮ್ಮೆ ರೆಡಿಯಾಗಿದ್ದಾರೆ. ಈ ಹಿಂದೆ ಭೂಪತಿ, ಇಂದ್ರ ಮೊದಲಾದ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ನಟಿಸಿರುವ ದರ್ಶನ್, ಈ ಬಾರಿ ಒನ್ಸ್ ಎಗೇಯ್ನ್ ಡಬಲ್ ಆ್ಯಕ್ಟಿಂಗ್‍ಗೆ ಬಣ್ಣ ಹಚ್ಚುತ್ತಿದ್ದಾರೆ.

you_tube_chitraloka1.gif

ದರ್ಶನ್‍ಗೆ ಡಬಲ್ ಆ್ಯಕ್ಟಿಂಗ್ ಜವಾಬ್ದಾರಿ ಕೊಟ್ಟಿರುವುದು ಮಿಲನ ಪ್ರಕಾಶ್. ದರ್ಶನ್‍ಗೆ ತಾರಕ್ ಎಂಬ ಕೌಟುಂಬಿಕ ಹಿಟ್ ಚಿತ್ರ ಕೊಟ್ಟಿರುವ ಪ್ರಕಾಶ್, ಈ ಬಾರಿ ದರ್ಶನ್ ಅವರಿಗಾಗಿಯೇ ವಿಭಿನ್ನ ಕಥೆ ಹೆಣೆದಿದ್ದು, ದ್ವಿಪಾತ್ರ ಮಾಡಲಿದ್ದಾರಂತೆ ದರ್ಶನ್. ಏನ್ ಕಥೆ ಎಂದರೆ ದರ್ಶನ್ ಸಿಕ್ಕಲ್ಲ, ಪ್ರಕಾಶ್ ಮಾತನಾಡಲ್ಲ. ಸದ್ಯಕ್ಕೆ ಗಾಂಧಿನಗರದಲ್ಲಿ ಈ ಸುದ್ದಿ ಭರ್ಜರಿ ಸದ್ದು ಮಾಡ್ತಿರೋದಂತೂ ನಿಜ.