Print 

User Rating: 0 / 5

Star inactiveStar inactiveStar inactiveStar inactiveStar inactive
 
shubha poonja image
shubha poonja

ಮೊಗ್ಗಿನ ಮನಸಿನ ಹುಡುಗಿ ಶುಭಾ ಪೂಂಜಾ ಈಗ ಅಂಬುಜ ಆಗುತ್ತಿದ್ದಾರೆ. ಶ್ರೀನಿ ಹನುಮಂತರಾಜ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಅಂಬುಜ. ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯೇ ಚಿತ್ರದ ಕಥೆಗೆ ಆಧಾರ. ಲಂಬಾಣಿ ಹುಡುಗಿಗೆ ನೆರವಾಗುವ ಪತ್ರಕರ್ತೆಯ ಪಾತ್ರ ಶುಭಾ ಪೂಂಜಾ ಅವರದ್ದು.

you_tube_chitraloka1.gif

ಕಾಶಿನಾಥ್ ಡಿ.ಮಡಿವಾಳರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕೆಲವು ದಿನಗಳ ನಂತರ ಎಂಬ ಸಸ್ಪೆನ್ಸ್ ಚಿತ್ರ ಮಾಡಿ ಗಮನ ಸೆಳೆದಿದ್ದ ಶ್ರೀನಿ, ಈ ಚಿತ್ರದ ಮೂಲಕ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಡಿಸೆಂಬರ್‍ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ನಾಯಕನ ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿದೆ ಚಿತ್ರತಂಡ.