ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಹರ್ಷ ಒಟ್ಟಿಗೇ ಸೇರಿದರೆ ಒಂದು ಹಿಟ್ ಸಿನಿಮಾ ಸೃಷ್ಟಿಯಾಗೋದು ಗ್ಯಾರಂಟಿ. ಈ ಹಿಂದೆ ಭಜರಂಗಿ, ವಜ್ರಕಾಯ ಚಿತ್ರಗಳನ್ನು ಅದನ್ನು ಪ್ರೂವ್ ಮಾಡಿವೆ. ಭಜರಂಗಿ 2 ಚಿತ್ರದ ಸ್ಪೆಷಲ್ ಟೀಸರ್ ಕೂಡಾ ಭರವಸೆ ಹುಟ್ಟಿಸಿದೆ. ಭಜರಂಗಿ 2 ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿರುವಾಗಲೇ ಇನ್ನೊಂದು ಚಿತ್ರಕ್ಕೆ ಸೈ ಎಂದಿದೆ ಶಿವಣ್ಣ-ಹರ್ಷ ಜೋಡಿ.
ಹರ್ಷ ಹೇಳಿರುವ ಇನ್ನೊಂದು ಕಥೆ ಶಿವಣ್ಣಗೆ ತುಂಬಾ ಇಷ್ಟವಾಗಿದೆ. ಇಂಥಾದ್ದೊಂದು ಕಥೆಗೆ ಫ್ಯಾಷನೇಟ್ ನಿರ್ಮಾಪಕರೇ ಬೇಕು ಎಂದಿರುವ ಶಿವಣ್ಣ, ಸ್ವತಃ ತಾವೇ ನಿರ್ಮಾಪಕರನ್ನೂ ಹುಡುಕಿದ್ದಾರೆ.
ಶಿವಣ್ಣ ಚಿತ್ರದ ಮೂಲಕವೇ ನಿರ್ಮಾಪಕರಾಗಬೇಕು ಎಂದು ಕಾಯುತ್ತಿದ್ದ ಅಶೋಕ್ ಕುಮಾರ್ ಮತ್ತು ರಮೇಶ್ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ಸುಧೀಂದ್ರ ಕೂಡಾ ಕೈ ಜೋಡಿಸಿದ್ದಾರೆ.
ಶಿವಣ್ಣ ಹುಟ್ಟುಹಬ್ಬದ ದಿನ ಒಂದು ಬ್ಲಾಕ್ & ವೈಟ್ ಪೋಸ್ಟರ್ ಜಾಹೀರಾತು ನೋಡಿದ್ದಿರಲ್ಲ.. ಅಪ್ರೋಡೈಟ್ ರಿನೈಸಾನ್ಸ್ ಟಾಕೀಸ್ ಪ್ರೈ.ಲಿ. ಬ್ಯಾನರ್‍ನ ಆ ಚಿತ್ರವೇ ಈ ಹರ್ಷ, ಶಿವಣ್ಣ ಕಾಂಬಿನೇಷನ್‍ನ ಹೊಸ ಚಿತ್ರ.